ಸೇನಾ ಸಿಬ್ಬಂದಿ ಬಿಡುಗಡೆ ಕತಾರ್- ಭಾರತ ಬಾಂಧವ್ಯ ವೃದ್ಧಿ

ದೋಹಾ,ಫೆ.೧೫- ಭಾರತೀಯ ನೌಕಾಪಡೆಯ ೮ ಮಾಜಿ ಸಿಬ್ಬಂದಿಯನ್ನು ಜೈಲು ಶಿಕ್ಷೆಯಿಂದ ಬಿಡುಗಡೆ ಮಾಡಿರುವ ಕತಾರ್ ಕ್ರಮ, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಗೆ ಮತ್ತಷ್ಟು ಸಹಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಯುಎಇಗೆ ಎರಡು ದಿನಗಳ ಪ್ರವಾಸದ ವೇಳೆ ಅಲ್ಲಿನ ಸಹವರ್ತಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರೊಂದಿಗೆ ದ್ವಿ ಪಕ್ಷೀಯ ಸಭೆ ನಡೆಸಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಈ ವಿಷಯ ತಿಳಿಸಿದ್ದಾರೆ.೨೦೧೬ರ ಜೂನ್‌ನಲ್ಲಿ ಕತಾರ್‍ಗೆ ಮೊದಲ ಭೇಟಿ ನೀಡಿದ್ದ ವೇಳೆ ಅನೇಕ ಚರ್ಚೆಗಳು, ಮಾತುಕತೆ ನಡೆದಿದ್ದವು. ಅವುಗಳ ಪ್ರಗತಿ ಪರಿಶೀಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದು ಭಾರತ-ಕತಾರ್ ಸ್ನೇಹವನ್ನು ಹೆಚ್ಚಿಸಲು ನೆರವಾಗಲಿದೆ ಎಂದಿದ್ದಾರೆ.ಪ್ರಧಾನಿ ಅವರ ಮಾತುಕತೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು ಪ್ರಧಾನಿ ಅವರ ಕತಾರ್ ಭೇಟಿ ಫಲಪ್ರಧವಾಗಿದೆ, ಚರ್ಚೆಯ ವೇಳೆ ವ್ಯಾಪಾರ ಮತ್ತು ಹೂಡಿಕೆ, ಇಂಧನ, ಹಣಕಾಸು ಇತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಣೆ ಸೇರಿದಂತೆ ಹಲವು ಮಹತ್ವದ ಮಾತುಕತೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ಧಾರೆ.ಎರಡು ದಿನಗಳ ಯುಎಇ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಬುದಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆ. ಪ್ರತಿಷ್ಠಿತ ವಿಶ್ವ ಸರ್ಕಾರಗಳ ಶೃಂಗಸಭೆಯನ್ನು ಉದ್ದೇಶಿಸಿ ಭಾಷಣ , ದ್ವಿಪಕ್ಷೀಯ ಚರ್ಚೆ ಮತ್ತು ಮಾತುಕತೆಗಳು ನಡೆದಿವೆ ಎಂದು ಅವರು ತಿಳಿಸಿದ್ಧಾರೆ.