ಸೇನಾ ಮುಖ್ಯಸ್ಥರ ಭೇಟಿಗೆ ಸಿರಿಯಾ ಖಂಡನೆ

ಡಮಾಸ್ಕಸ್ (ಸಿರಿಯಾ), ಮಾ.೬- ಕುರ್ದಿಶ್ ಹಿಡಿತದಲ್ಲಿರುವ ಈಶಾನ್ಯ ಸಿರಿಯಾದಲ್ಲಿನ ಸೇನಾ ನೆಲೆಗೆ ಅಮೆರಿಕಾದ ಜಂಟಿ ಸೇನಾ ಮುಖ್ಯಸ್ಥ ಮಾರ್ಕ್ ಮಿಲ್ಲೆ ನೀಡಿದ ಅನಿರೀಕ್ಷಿತ ಭೇಟಿಯನ್ನು ಸಿರಿಯಾದ ವಿದೇಶಾಂಗ ಸಚಿವಾಲಯವು ತೀವ್ರವಾಗಿ ಖಂಡಿಸಿದೆ.
ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ನಿಯಂತ್ರಣದಲ್ಲಿರುವ ಯುದ್ಧ ಪೀಡಿತ ಸಿರಿಯಾದ ಪ್ರದೇಶಗಳಲ್ಲಿ ನೆಲೆಸಿರುವ ಯುಎಸ್ ಪಡೆಗಳನ್ನು ಭೇಟಿ, ಸೇನಾ ಮುಖ್ಯಸ್ಥ ಮಿಲ್ಲೆ ಅವರು ಭೇಟಿ ಮಾಡಿದರು. ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ವಿರುದ್ಧದ ಹೋರಾಟದ ಭಾಗವಾಗಿ ಅಮೆರಿಕಾ ಸೇನಾಪಡೆಯ ಸುಮಾರು ೯೦೦ ಯೋಧರನ್ನು ಈಶಾನ್ಯ ಸಿರಿಯಾದಲ್ಲಿ ಕುರ್ದಿಶ್ ಹಿಡಿತದಲ್ಲಿರುವ ಹಲವಾರು ನೆಲೆಗಳು ಮತ್ತು ಪೋಸ್ಟ್‌ಗಳಲ್ಲಿ ನಿಯೋಜಿಸಲಾಗಿದೆ. ಸದ್ಯ ಇದೀಗ ಈ ನೆಲೆಗಳಿಗೆ ಮಿಲ್ಲೆ ಅವರು ಅನಿರೀಕ್ಷಿತ ಭೇಟಿ ನೀಡುವ ಮೂಲಕ ಎಲ್ಲರಿಗೆ ಅಚ್ಚರಿ ನೀಡಿದ್ದಾರೆ. ಆದರೆ ಈ ಭೇಟಿಯನ್ನು ಇದೀಗ ಸಹಜವಾಗಿಯೇ ಸಿರಿಯಾ ಸರ್ಕಾರ ತೀವ್ರವಾಗಿ ಖಂಡಿಸಿದೆ. ಸಿರಿಯಾ ಸರ್ಕಾರ ಈಗಾಗಲೇ ಎಸ್‌ಡಿಎಫ್ ಪಡೆಯನ್ನು ಪ್ರತ್ಯೇಕತಾವಾದಿಗಳೆಂದು ಘೋಷಿಸಿವೆ. ಆದರೆ ಅತ್ತ ಎಸ್‌ಡಿಎಫ್ ನಾವು ಪ್ರತ್ಯೇಕತಾವಾದಿಗಳಲ್ಲ, ಬದಲಾಗಿ ಕೇವಲ ಸ್ವ ಆಡಳಿತ ನಡೆಸುವ ಇರಾದೆ ಮಾತ್ರ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಪ್ರಕ್ರಿಯೆ ನಡೆಕೊಂಡು ಬರುತ್ತಿದೆ. ಸದ್ಯ ಎಸ್‌ಡಿಎಫ್ ಹಿಡಿತದಲ್ಲಿರುವ ಈಶಾನ್ಯ ಸಿರಿಯಾಗೆ ಮಿಲ್ಲೆ ಭೇಟಿ ನೀಡಿ, ಹಲವು ಸುತ್ತಿನ ಸಭೆ ನಡೆಸಿರುವುದು ಸಹಜವಾಗಿಯೇ ಬಶರ್ ಅಲ್ ಅಸದ್ ನೇತೃತ್ವದ ಸಿರಿಯಾಗೆ ಸರ್ಕಾರದ ಕಣ್ಣು ಕೆಂಪಾಗುವಂತೆ ಮಾಡಿದ್ದು, ಅಮೆರಿಕಾದ ನಡೆಯನ್ನು ಕಾನೂನುಬಾಹಿರ ಎಂದು ಕರೆದಿದೆ.