ಸೇನಾ ಭರ್ತಿ ಶಿಬಿರಕ್ಕೆ ಭಗವಂತ ಖುಬಾ ಭೇಟಿ

ಬೀದರ:ನ.7:ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘ ಕಲಬುರಗಿ ವಿಭಾಗ, ಕಲಬುರಗಿ ಪ್ರಾಯೋಜಕತ್ವದಲ್ಲಿ ಜರುಗುತ್ತಿರುವ ಪೂರ್ವ ಸೇನಾ ಭರ್ತಿ ಶಿಬಿರಕ್ಕೆ ಭಗವಂತ ಖುಬಾ, ಮಾನ್ಯ ಕೇಂದ್ರ ನೂತನ, ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹ ಸಚಿವರು 5 ನೇ ನವೆಂಬರ್ ಶನಿವಾರದಂದು ಭೇಟಿ ನೀಡಿದರು. ಈ ವೇಳೆಯಲ್ಲಿ ಅವರು ಪೂರ್ವ ಸೈನ್ಯ ಮಿಲಿಟರಿ ಕ್ಯಾಂಪ್ ನಲ್ಲಿ ಅಗ್ನಿವೀರ ಸೇನಾ ಆಕಾಂಕ್ಷಿಗಳ ತರಬೇತಿಯಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿದರು.
ನಂತರ ಅಗ್ನಿವೀರ ಸೇನಾ ಆಕಾಂಕ್ಷಿಗಳನ್ನು ಉದ್ದೇಸಿ ಮಾತನಾಡಿದ ಸಚಿವರು ಎಲ್ಲ ಅಭ್ಯರ್ಥಿಗಳು ಸೇನೆಯಲ್ಲಿ ಸೇರಬೇಕು ಎಂಬ ಒಂದು ದೃಢನಿರ್ಧಾರ ಮಾಡಿ ಸೇನಾ ತರಬೇತಿಗೆ ಬಂದಿರುವುದು ನಿಮ್ಮ ಗಟ್ಟಿನಿರ್ಧಾರ ಮತ್ತು ಧೈರ್ಯವನ್ನು ತೋರಿಸುತ್ತದೆ ದೇಶಸೇವೆ ಮಾಡಲು ಇಚ್ಛಿಸೀರುವ ನಿಮ್ಮ ನಿರ್ಧಾರ ಶ್ಲಾಘನಿಯ ನೀವೆಲ್ಲ ಸೇನೆ ಸೇರಿ ದೇಶ ಸೇವೆ ಸಲ್ಲಿಸುವಂತಾಗಬೇಕು ಹಾಗೂ ದೇಶದ ಜವಾಬ್ದಾರಿಯುತ ವ್ಯಕ್ತಿಗಳಾಗಬೇಕು ಉತ್ತೇಜಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರ್ನಲ್ ಶರಣಪ್ಪ ಅವರ ನೇತೃತ್ವದಲ್ಲಿ ಈ ಮಿಲಿಟರಿ ಕ್ಯಾಂಪ್ ಜರುಗುತ್ತಿರುವುದು ಈ ಪ್ರದೇಶಕ್ಕೆ ಒಂದು ಕೊಡುಗೆ ಮತ್ತು ಅಭ್ಯರ್ಥಿಗಳಿಗೆ ಉತ್ತಮ ಸೇನಾ ತರಬೇತಿ ನೀಡುತ್ತಿರುವ ಅವರ ಈ ಕಾರ್ಯ ಮೆಚ್ಚುವಂತಹದು ಎಂದು ಅವರು ಈ ವೇಳೆ ನುಡಿದರು.
ಈ ವೇಳೆ ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪೂರೆ,ಶ್ರೀ ರೇವಣಸಿದ್ಧಪ್ಪ ಜಲಾದೆ ನಿರ್ದೇಶಕರು ಕೆ. ಕೆ. ಎಚ್. ಆರ್. ಎ. ಸಿ. ಎಸ್ , ಡಾ. ಶರಣಬುಳ್ಳಾ ಜಿ. ಎಸ್. ಎ. ನಿರ್ದೇಶಕರು , ಶ್ರೀ ಬಸವರಾಜ್ ಧನ್ನೂರ, ಶ್ರೀ ರಾಜೇಂದ್ರ ಗಂದಗೆ,ಡಾ ವಿಠ್ಠಲ್ ರೆಡ್ಡಿ ಪ್ರಾಂಶುಪಾಲರು ಬಿ ವಿ ಬಿ ಕಾಲೇಜು, ಶ್ರೀ ರಫಿ ತಾಳಿಕೋಟಿ ಎ. ಎನ್. ಓ ಕರ್ನಾಟಕ ಶಾಲೆ , ಡಾ ರಾಜಕುಮಾರ ಪ್ರಾಧ್ಯಾಪಕರು ಸರ್ಕಾರಿ ಪ್ರಧಮ ದರ್ಜೆ ಕಾಲೇಜು, ಪ್ರಾಂಶುಪಾಲರಾದ ಸ್ಕ್ಯಾಡನ್ ಲೀಡರ್ ಇವ್ಲಿನ್ ಜಾರ್ಜ್, , ಸುಬೇದಾರ್ ಮಡೆಪ್ಪ, ಸುಬೇದಾರ ಮೇಜರ್ ರಾಮ್ ದವಲಜೆ ಪಿ. ಆರ್. ಓ ಕಾರಂಜಿ ಸ್ವಾಮಿ , ಶ್ರೀ ಜೈಪ್ರಕಾಶ್, ಶ್ರೀ ಅಶೋಕ ಪಾಟೀಲ ತರಬೇತುದಾರರು, ಶಿಕ್ಷಕರು ಇನ್ನಿತರರು ಉಪಸ್ಥಿತರಿದ್ದರು.