ಸೇನಾಪ್ರೇಮಿ ವಿಕಲಚೇತನ

ಕಲಬುರಗಿ,ಮೇ 18: ಇವರು ಬಾಲ್ಯದಿಂದ ವಿಕಲಚೇತನ.ಮನಸ್ಸು ದೇಶದ ಸೈನಿಕರಿಗಾಗಿ ಮಿಡಿಯುತ್ತಿದೆ.ಹೆಸರು ಶರಣು ಗುರಸಿದ್ದಪ್ಪ ಶಿರಸಗಿ. ಕಲಬುರ್ಗಿ ಜಿಲ್ಲೆಯ ಜೇವರಗಿ ತಾಲೂಕಿನ ಮಂದೇವಾಲ ಗ್ರಾಮದವರು. ಓದಿದ್ದು ಪಿಯುಸಿವರೆಗೆ.
ಸದ್ಯ 45 ವಯಸ್ಸಿನ ಇವರು ಬಾಲ್ಯದಲ್ಲಿ ಪೆÇಲಿಯೋದಿಂದ ಎರಡು ಕಾಲುಗಳ ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ. ಸರಕಾರ ವಿಕಲಚೇತನರಿಗಾಗಿ ನೀಡುವ ಮಾಸಾಶನವೇ ಕುಟುಂಬಕ್ಕೆ ಆಧಾರ.ಗ್ರಾಮದ ರೈತಾಪಿ ಜನರ ಊರುಗಾರಿಗೆಯ ಸ್ಟ್ಯಾಂಪ್ ಪೇಪರ್ ಬರಹಗಾರ ವೃತ್ತಿಯಾದರೆ ಸಮಾಜ ಸೇವೆ ಇವರ ಪ್ರವೃತ್ತಿಯಾಗಿದೆ.
ಕಳೆದ 15 ವರ್ಷಗಳಿಂದ ಹಲವಾರು ಉದ್ಯೋಗ ಮಾಡಿದರು. ಅದಾವದು ಬದುಕಿಗೆ ಕೈ ಹಿಡಿಯಲಿಲ್ಲ.ಸದ್ಯ ಗ್ರಾಮದಲ್ಲಿ ಒಪ್ಪಿಗೆಪತ್ರ ಸ್ಟಾಂಪ ಬರೆಯುವ ಕಾಯಕ ಮಾಡುತ್ತಲಿರುವರು.ರೈತರಿಗೆ ಬರೆದುಕೊಟ್ಟ ಒಪ್ಪಿಗೆ ಪತ್ರಕ್ಕೆ ಪ್ರತಿಯಾಗಿ ಸಂತೋಷದಿಂದ ನೂರು ಇನ್ನೂರು ರೂ ಹಣ ಕೊಡುವರು. ಹೀಗೆ ಜಮೆಯಾದ ಹಣ ಸೈನಿಕರ ನಿಧಿಗೆ ಸಂದಾಯಮಾಡುವ ಸಂಕಲ್ಪ ಹೊಂದಿದ್ದಾರೆ.ಹೀಗೆ ಶೇಖರಿಸಿದ ಹಣ ಇಲ್ಲಿಯವರೆಗೆ ಒಂದು ಹುಂಡಿಯಲ್ಲಿ ಕೂಡಿಟ್ಟಿದ್ದಾರೆ.
ಇದನ್ನು ನಮ್ಮ ದೇಶಕಾಯುವ ಸೈನಿಕರಿಗೆ ಉಪಯೋಗವಾಗಲಿ ಎಂಬ ಸದುದ್ದೇಶ ವಿದೆ. ಇಲ್ಲಿಯವರೆಗೆ ಅಂದರೆ ಏಳು ವರ್ಷದಲ್ಲಿ ಅಂದಾಜು ಮೂವತ್ತರಿಂದ ಮೂವತೈದು ಸಾವಿರ ರೂ ಜಮಾ ಆಗಿರಬಹುದು. ಇನ್ನು ಹತ್ತರಿಂದ ಹದಿನೈದು ಸಾವಿರ ಹಣ ಸೇರಿಸಿ ಐವತ್ತು ಸಾವಿರ ರೂಪಾಯಿ ಸೈನಿಕರ ನಿಧಿಗೆ ಹಸ್ತಾಂತರಿಸುವ ಸದುದ್ದೇಶ ಹೊಂದಿದ್ದಾರೆ. ಸೂಕ್ತ ಮಾಹಿತಿ ಕೊರತೆಯಿಂದ ಇಲ್ಲಿಯವರೆಗೂ ಹಣ ತಲುಪಿಸಲಾಗಲಿಲ್ಲವಂತೆ.
ವಿಕಲಚೇತನರಿಗೆ ಅನುಕಂಪ ಬೇಕಿಲ್ಲ. ಎಲ್ಲರೂ ಅನುಕಂಪ ತೋರಿಸುವರೇ ಇದ್ದಾರೆ .ಅದರ ಬದಲು ಗ್ರಾಮ ಪಂಚಾಯತಿಯಲ್ಲೇ ಒಂದು ಕೆಲಸ ಕೊಟ್ಟದ್ದರೆ ಸಾಕಿತ್ತು ಅಥವಾ ಒಂದು ಉದ್ಯೋಗಕ್ಕಾಗಿ ಸಹಾಯ ಮಾಡಿದರಾಗಿತ್ತು ಎಂದು ಬೇಸರದಿಂದಲೇ ನುಡಿಯುವರು.
-ಗುರುರಾಜ.ಕೆ.ಪಟ್ಟಣಶೆಟ್ಟಿ