ಸೇತುವೆ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಅಳ್ನಾವರ, ನ 11- ಕಳೆದ ಮುಂಗಾರು ಹಂಗಾಮಿನಲ್ಲಿ ಬಾರಿ ಮಳೆಯಿಂದ ಕೊಚ್ಚಿ ಹೋಗಿರುವ ಧಾರವಾಡ ತಾಲೂಕಿನ ಮದಿಕೊಪ್ಪ-ಕಲ್ಲಾಪೂರ ರಸ್ತೆಯ ನಡುವಿನ ಹಳ್ಳದ ಸೇತುವೆ ಮತ್ತು ರಸ್ತೆಯ ದುರಸ್ಥಿ ಕಾಮಗಾರಿಗೆ ಕಲಘಟಗಿ ಕ್ಷೇತ್ರದ ಶಾಸಕ ಸಿ.ಎಮ್.ನಿಂಬಣ್ಣವರ ಸೋಮವಾರ ಚಾಲನೆ ನೀಡಿದರು.
ಮದಿಕೊಪ್ಪ ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿನ ಸೇತುವೆ ಕಳೆದ ಮಳೆಗಾಲದಲ್ಲಿ ಕಿತ್ತು ಹೋಗಿ ಗ್ರಾಮಸ್ತರು ಎಲ್ಲಿಗೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ ರೈತರು ತಮ್ಮ ಹೊಲದಲ್ಲಿ ಬೆಳೆದ ಭತ್ತ,ಕಬ್ಬು ಮತ್ತಿತರ ಕೃಷಿ ಉತ್ಪನ್ನಗಳನ್ನು ಸಾಗಿಸಲು ಯಾವುದೆ ಸಂಪರ್ಕ ರಸ್ತೆಯೆ ಇಲ್ಲದಾಗಿದ್ದು ಪರದಾಡುತ್ತಿದ್ದಾರೆ ಇಲ್ಲಿ ಸಧ್ಯ ಲಾರಿ,ಟ್ರ್ಯಾಕ್ಟರ ಸೇರಿದಂತೆ ಯಾವುದೇ ವಾಹನ ಹಾಗೂ ಜನರು ಕೂಡಾ ನಡೆದುಕೊಂಡು ಹೋಗಲು ಸಾದ್ಯವಿರುವದಿಲ್ಲ ಹಾಗಾಗಿ ಕೂಡಲೆ ಸೇತುವೆ ಮತ್ತು ರಸ್ತೆ ದುರಸ್ಥಿ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದರು ಜಿ.ಪಂ ಅನುಧಾನದಲ್ಲಿ ಕಾಮಗಾರಿ ಕೈಕೊಂಡಿದ್ದು ಇನ್ನುಳಿದ ಅವಶ್ಯಕ ಅನುಧಾನವನ್ನು ಸರ್ಕಾರದಿಂದ ಕೊಡಿಸುವದಾಗಿ ಶಾಸಕ ನಿಂಬಣ್ಣವರ ಭರವಸೆ ನೀಡಿದರು.
ಸ್ಥಳದಲ್ಲಿದ್ದ ರೈತರಿಂದ ಅಹವಾಲುಗಳನ್ನು ಆಲಿಸಿದ ಶಾಸಕರು ಸೇತುವೆ ಮತ್ತು ರಸ್ತೆಯ ದುರಸ್ತಿ ಕೆಲಸವನ್ನು ತಕ್ಷಣದಿಂದ ಕೈಗೆತ್ತಿಕೊಳ್ಳಬೇಕು ಯಾವುದೇ ಕುಂಟು ನೆಪ ಹೇಳದೆ ಕೆಲಸ ನಿಲ್ಲಿಸಬಾರದು ರೈತರು ಕಬ್ಬು ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಲೋಕೋಪಯೋಗಿ ಅಭಿಯಂತರುಗಳಿಗೆ ಸೂಚಿಸಿದರು.
ಜನರಿಗೆ ಅನುಕೂಲ ಕಲ್ಪಿಸುವದು ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಜನರು ನಮ್ಮ ಮೇಲೆ ಇಟ್ಟಿರುವ ಭರವಸೆಯಂತೆ ಕೆಲಸ ಮಾಡಬೇಕಾಗಿದೆ ಅನಗತ್ಯ ವಿಳಂಭ ಮಾಡದೆ ಕೆಲಸ ಮುಗಿಸಬೇಕು ಅದಕ್ಕೆ ಅಗತ್ಯವಿರುವ ಅನುಧಾನವನ್ನು ಸರ್ಕಾರದಿಂದ ಮಂಜೂರ ಮಾಡಸಲಾಗುವದು ಎಂದು ಹೇಳಿದ ಶಾಸಕ ನಿಂಬಣ್ಣವರ ಅವರು ಸಾರ್ವಜನಿಕರು ಸಹ ಕೆಲಸಕ್ಕೆ ಸಹಕಾರ ನೀಡಿ ಕಾಮಗಾರಿ ಆದಷ್ಟು ಶೀಘ್ರ ಮುಗಿಯಲು ಕೈ ಜೋಡಿಸಬೇಕೆಂದರು.
ಇದೆ ಸಂದರ್ಭದಲ್ಲಿ ಮದಿಕೊಪ್ಪ,ಕಲ್ಲಾಪೂರ,ರಾಮಾಪೂರ,ವೀರಾಪೂರ ಗ್ರಾಮಸ್ತರು ಅನೇಕ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಕಲ್ಮೇಶ ಬೇಲೂರ,ಶಂಕರ ಬಸವರೆಡ್ಡಿ,ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ,ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಬಿ.ಚೌಡಣ್ಣವರ,ಸ.ಕಾ.ಅ. ವ್ಹಿ.ಎನ್.ಪಾಟೀಲ,ಯು.ವ್ಹಿ.ಗದಗಕರ,ಪಂಚಾಯತ ಅಭಿವೃದ್ದಿ ಅಧಿಕಾರಿ ಶಶಿರೇಖಾ ಚಕ್ರಸಾಲಿ,ಗ್ರಾಮಸ್ತರಾದ ರಾಮನಗೌಡ ಪಾಟೀಲ,ಬಸಪ್ಪ ಕುರಾಡಿ,ಈರಪ್ಪ ಬಾಗೋಡಿ,ಬಸವರಾಜ ಸಾವಳಗಿ,ಸುನೀಲ ಪಾಟೀಲ ಮತ್ತಿತರರು ಇದ್ದರು.