ಸೇತುವೆ ಮೇಲಿಂದ ಬಿದ್ದ ಟಿಪ್ಪರ್


ಲಕ್ಷ್ಮೇಶ್ವರ,ಸೆ.26: ತಾಲೂಕಿನ ಗೊಜನೂರು ಸಮೀಪದ ಹಳ್ಳದಲ್ಲಿ ಎಂ ಸ್ಯಾಂಡ್ ತುಂಬಿದ್ದ ಟಿಪ್ಪರ್ ಒಂದು ಸೇತುವೆ ಮೇಲಿಂದ ಮುಗುಚಿ ಬಿದ್ದ ಘಟನೆ ಜರುಗಿದೆ.
ಎಂ ಸ್ಯಾಂಡ್ ತುಂಬಿಕೊಂಡು ಮಾಗಡಿಯಿಂದ ಹೊರಟ್ಟಿದ್ದ ಈ ಟಿಪ್ಪರ್ ಗೊಜನೂರು ಸಮೀಪದ ಸೇತುವೆ ಮೇಲೆ ಎದುರುಗಡೆ ಬಂದ ವಾಹನಕ್ಕೆ ಸೈಡ್ ನೀಡಲು ಹೋದಾಗ ಸೇತುವೆ ಮೇಲಿನ ಒಂದು ಭಾಗದ ತಡೆ ಗೋಡೆ ಕುಸಿದು ಬಿದ್ದು ಟಿಪ್ಪರ್ ಹಳ್ಳಕ್ಕೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಗ್ರಾಮಸ್ಥರು ಒತ್ತಾಯ:- ಗೊಜನೂರು ಸಮೀಪದ ಈ ಸೇತುವೆಯು ಅತ್ಯಂತ ಹಳೆಯದಾಗಿದ್ದು, ಭಾರದ ಸಾಮರ್ಥ್ಯವನ್ನು ಕಳೆದುಕೊಂಡಿದೆ, ಲೋಕೋಪ್ರತಿ ವರ್ಷ ಇದಕ್ಕೆ ಕೇವಲ ಸುಣ್ಣ ಬಣ್ಣ ಬಡಿಯುತ್ತಿದ್ದು ನಿರರ್ಥಕವಾಗಿದೆ ಎಂದ ಗ್ರಾಮಸ್ಥರು ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.