ಸೇತುವೆ ನಿರ್ಮಾನಕ್ಕೆ ಮಾದಿಗ ದಂಡೋರ ಆಗ್ರಹ

ರಾಯಚೂರು, ಏ.೧೨- ಯರಗೇರಾ ಮಿಡಗಲದಿನ್ನಿ ಇಡಪನೂರು , ಮಿರ್ಜಾಪೂರು ಗ್ರಾಮದ ತಲಮಾರಿ ರಸ್ತೆಯಲ್ಲಿ ಬರುವಂತಹ ಹಳ್ಳಿಗಳಿಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಮಾದಿಗ ದಂಡೋರಾ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಯರಗೇರಾ ಮತ್ತು ತಲಮಾರಿ ರಸ್ತೆಯಲ್ಲಿ ಬರುವಂತಹ ಹಳ್ಳಕ್ಕೆ ಸೇತುವೆ ನಿರ್ಮಾಣ ಇಲ್ಲದೆ. ಮಳೆಗಾಲದಲ್ಲಿ ಯರಗೇರಾ ಮಿಡಗಲದಿನ್ನಿ,ಇಡಪನೂರು ಮತ್ತು ಮಿರ್ಜಾಪೂರು ಈ ಗ್ರಾಮಗಳ ಸಾರ್ವಜನಿಕರಿಗೆ ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತದೆ ಎಂದು ದೂರಿದರು.
ಕಳೆದ ವರ್ಷ ಯರಗೇರಾ ಗ್ರಾಮದ ರೈತನೊಬ್ಬ ತಮ್ಮ ಹೊಲಕ್ಕೆ ಅದೇ ಹಳ್ಳದ ಮೂಲಕ ಹೋಗುವಾಗ ಹಳ್ಳದ ನೀರಿನ ರಬಸಕ್ಕೆ ಎತ್ತಿನ ಬಂಡಿ ಸಮೇತ ಕೊಚ್ಚಿಕೊಂಡು ಹೋಗಿದ್ದು.ಆದರೆ ಈ ವಿಷಯದ ಬಗ್ಗೆ ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಕೂಡ ಇದರ ಬಗ್ಗೆ ಯಾವ ಕ್ರಮವನ್ನು ಕೂಡ ಕೈಗೊಂಡಿಲ್ಲ. ಮುಂದಿನ ಮಳೆಗಾಲದಲ್ಲಿ ಮತ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇವೆ.ಆದ್ದರಿಂದ ಆದಷ್ಟು ಬೇಗನ ಎಲ್ಲಾ ಗ್ರಾಮದ ಹಳ್ಳಿಗಳಿಗೆ ಸೇತುವೆ ನಿರ್ಮಾಣ ಮಾಡಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ವಿಳಂಬ ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹಾಗೂ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಸೇರಿಕೊಂಡು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ರಾಜು ರುಬೇನ್, ಉಪಾಧ್ಯಕ್ಷ
ಮಧುರಾಜ್, ಚಿನ್ನಿ, ಸೇರಿದಂತೆ ಅನೇಕರು ಇದ್ದರು.