ಬೀದರ್:ಜು.31: ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಮೂರು ದಿನದ ಬಳಿಕ ಶನಿವಾರ (ಜುಲೈ 29) ಧನ್ನೂರ್ ಗ್ರಾಮದ ಸೇತುವೆ ಬಳಿ ಪತ್ತೆಯಾಗಿದೆ.
ಮೃತ ಯುವಕನನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ್ ಆರ್. ಗ್ರಾಮದ ಮಲ್ಲಪ್ಪ ಶರಣಪ್ಪ ಕರೆಪನೋರ್ (25) ಎಂದು ಗುರುತಿಸಲಾಗಿದೆ.
ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಮೂರು ದಿನಗಳಾದರೂ ಇನ್ನೂ ಪತ್ತೆಯಾಗದ ಕಾರಣ ಬೀದರ್ ಪೆÇಲೀಸರು ಡ್ರೋನ್ ಮೊರೆ ಹೋಗಿದ್ದರು.
ಮೂರು ದಿನಗಳ ಹಿಂದೆ ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ಸೇತುವೆ ದಾಟುವಾಗ ಯುವಕ ಮಲ್ಲಪ್ಪ ಕರೆನವರ್ ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಸ್ಥಳೀಯರ ಮೂಲಕ ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಮೂಲಕ ಶೋಧನಾ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ ಸೂಚನೆಯಂತೆ ಯುವಕನ ಮೃತದೇಹವನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮೆರಾ ಬಳಸಿ ಶೋಧ ಕಾರ್ಯ ನಡೆಸಿದ್ದರು. ಡ್ರೋನ್ ಕ್ಯಾಮೆರಾ ಮತ್ತು ಡಿಆರ್‍ಎಫ್ ತಂಡದ ಸಿಬ್ಬಂದಿಗಳು ನಿರಂತರ ಶೋಧನಾ ಕಾರ್ಯ ನಡೆಸಿದ್ದರು. ಕೊನೆಗೂ ಮೂರು ದಿನಗಳ ಬಳಿಕ ಯುವಕನ ಶವ ಪತ್ತೆಯಾಗಿದೆ.