ಸೇತುವೆ ಕುಸಿದು ೬ ಮಂದಿ ಸಾವು

ನವದೆಹಲಿ,ಮಾ.೨೭- ಬಾಲ್ಟಿಮೋರ್ ಸೇತುವೆ ಕುಸಿದು ನಾಪತ್ತೆಯಾಗಿದ್ದ ಆರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದಾಗ ಹಡಗು ಬಾಲ್ಟಿಮೋರ್‌ನಿಂದ ಕೊಲಂಬೊ ಕಡೆಗೆ ತೆರಳುತ್ತಿತ್ತು. ಸೇತುವೆ ಕುಸಿತ ಕಂಡಿದ್ದರಿಂದ ಕೆಲಸ ಮಾಡುತ್ತಿದ್ದ ೬ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಾರ್ಮಿಕರ ಹುಡುಕಾಟದಲ್ಲಿ ಸಮಯದ ಅವಧಿ ಆಧರಿಸಿ ಮತ್ತು ನೀರಿನ ತಾಪಮಾನ ಗಣನೆಗೆ ತೆಗೆದುಕೊಂಡು ಕಾರ್ಮಿಕರು ಮೃತಪಟ್ಟಿರಬಹುದು ಎಂದು ಕರಾವಳಿ ಕಾವಲು ಪಡೆಯ ಅಡ್ಮಿರಲ್ ಶಾನನ್ ಗಿಲ್ರೆಥ್ ಹೇಳಿದ್ದಾರೆ.
ಸಿಂಗಾಪುರ ಮೂಲದ ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿನರ್ಜಿ ಮೆರೈನ್ ಗ್ರೂಪ್ ಸೇತುವೆ ನಿರ್ಮಾಣದ ಸಮಯದಲ್ಲಿ ಪಿಲ್ಲರ್ ಕುಸಿದು ಬಿದ್ದಿದ್ದು ಈ ಪರಿಣಾವ ಸೇತುವೆಯ ಭಾಗಶಃ ಕುಸಿತಕ್ಕೆ ಕಾರಣವಾಗಿ ಕೆಲಸ ಮಾಡುತ್ತಿದ್ದ ೬ ಮಂದಿ ನಾಪತ್ತೆಯಾಗಿದ್ದರು.
“ಡಾಲಿ” ಇಬ್ಬರು ಪೈಲಟ್‌ಗಳು ಸೇರಿದಂತೆ ೨೨ ಭಾರತೀಯ ಪ್ರಜೆಗಳ ಸಿಬ್ಬಂದಿ ಹೊಂದಿತ್ತು, ಅವರೆಲ್ಲರಿಗೂ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ಧಾರೆ. ಘಟನೆ ಸಂಭವಿಸಿದಾಗ ೧೦,೦೦೦ ಸಾಮಥ್ರ್ಯದ ಕಂಟೈನರ್ ಹಡಗು ೪,೬೭೯ ಹೊತ್ತೊಯ್ಯುತ್ತಿತ್ತು. ಬಾಲ್ಟಿಮೋರ್‌ನಿಂದ ಕೊಲಂಬೊಗೆ ತೆರಳುತ್ತಿದ್ದ ವೇಳೆ ಡಿಕ್ಕಿ ಸಂಭವಿಸಿ ಈ ಘಟನೆ ನಡೆದಿತ್ತು.
“ಡಾಲಿ” ೧೦,೦೦೦ ಇಪ್ಪತ್ತು-ಅಡಿ ಸಮಾನ ಘಟಕಗಳು ಸಾಮರ್ಥ್ಯವಿರುವ ದೊಡ್ಡ ಕಂಟೇನರ್ ಹಡಗು ಸಾಗುತ್ತಿತ್ತು. ಮಾಸ್ರ್ಕ್ ಘಟನೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಸೇತುವೆಗೆ ಹಡಗಿನ ಘರ್ಷಣೆಯ ನಿಖರವಾದ ಕಾರಣ ಅಸ್ಪಷ್ಟವಾಗಿಯೇ ಉಳಿದಿದೆ, ಇದು ವ್ಯಾಪಕ ಊಹಾಪೋಹ ಮತ್ತು ಕಾಳಜಿ ಹುಟ್ಟುಹಾಕಿದೆ.