ಸೇತುವೆಯಿಂದ ಕೆಳಗೆ ಬಿದ್ದ ಲಾರಿ-ಇಬ್ಬರಿಗೆ ಗಾಯ

ಶಹಾಬಾದ:ಸೆ.22:ನಗರದ ಸಮೀಪದ ಶಂಕರವಾಡಿ ಕಾಗಿಣಾ ಸೇತುವೆ ಬಳಿ ಲಾರಿ ಚಾಲಕ ತಪ್ಪಿನಿಂದ ಸೇತುವೆಯಿಂದ ಲಾರಿ ಕೆಳಗೆ ಬಿದ್ದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯವಾದರೆ, ಕಿನ್ನರ್‍ಗೆ ಗಂಭೀರ ಸ್ವರೂಪದ ಗಾಯ ಘಟನೆ ಮಂಗಳವಾರದಂದು ನಡೆದಿದೆ.

ರಾವೂರ ಗ್ರಾಮದ ಲಾರಿಯೂ ಕಲ್ಲಿನ ಫರ್ಸಿ ತುಂಬಿಕೊಂಡು ಕೆಂಭಾವಿ ಹೋಗಿ, ಫರ್ಸಿ ಖಾಲಿ ಮಾಡಿ ರಾವೂರ ಗ್ರಾಮಕ್ಕೆ ಬರುವಾಗ ಮಾರ್ಗ ಮಧ್ಯೆ ಸಮೀಪದ ಶಂಕರವಾಡಿ ಕಾಗಿಣಾ ಸೇತುವೆ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಲಾರಿ ಕೆಳಗೆ ಬಿದ್ದ ಪರಿಣಾಮ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾದರೆ, ಕಿನ್ನರ್‍ಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಪ್ರಜ್ಞೆ ತಪ್ಪಿದ್ದಾನೆ.ಕೂಡಲೇ ಅವನನ್ನು ಜಿಲ್ಲಾ ಸ್ಪತ್ರೆಗೆ ಸಾಗಿಸಲಾಗಿದೆ.ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.