ಸೇಡೋಳ: ಡ್ರೋನ್ ಯಂತ್ರ ಹಾಗೂ ಪರವಾನಿಗೆ ಪತ್ರ ವಿತರಣೆಡ್ರೋನ್‍ಗಳು ಮಹಿಳೆಯರ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ: ಶ್ರೀಕಾಂತ

ಸಂಜೆವಾಣಿ ವಾರ್ತೆ
ಹುಮನಾಬಾದ:ಮಾ.28: ನಮೋ ಡ್ರೋನ್ ದೀದಿ ಯೋಜನೆಯಡಿ ವಿತರಿಸಲಾದ ಡ್ರೋನ್‍ಗಳು ಗ್ರಾಮೀಣ ಮಹಿಳೆಯರಿಗೆ ಡ್ರೋನ್ ಪೈಲಟ್‍ಗಳಾಗಿ ತರಬೇತಿ ನೀಡುವದು ಮತ್ತು ಸ್ಥಳೀಯ ಕೃಷಿ ಸರಬರಾಜು ಸರಪಳಿಯ ಅವಿಭಾಜ್ಯ ಪಾಲುದಾರರನ್ನಾಗಿ ಮಾಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕಲಬುರಗಿಯ ಆರ್‍ಸಿಎಫ್‍ಎಲ್‍ಟಿಡಿ ಕಂಪನಿ ಮಾರುಕಟ್ಟೆ ವ್ಯವಸ್ಥಾಕರಾದ ಶ್ರೀಕಾಂತ ಹೇಳಿದರು.
ತಾಲ್ಲೂಕಿನ ಸೇಡೋಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ, ಡ್ರೋನ್ ಯಂತ್ರ ವಿತರಣೆ ಹಾಗೂ ಪರವಾನಿಗೆ ಪತ್ರ ವಿತರಿಸಿ ಅವರು ಮಾತನಾಡಿದರು. ಹಿಂದೂ ಬ್ಯೂರೋ: ಡ್ರೋನ್‍ಗಳು ರೈತರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವ್ಯಾಪಕ ಶ್ರೇಣಿಯ ಅತ್ಯಾಧುನಿಕ ಪರಿಹಾರಗಳನ್ನು ಒಳಗೊಂಡಿವೆ ಎಂದರು. ಆಚಿಟಿ, ಕೊಲ್ಯೂಷನ್ ಸೆನ್ಸರ್‍ಗಳು, ಸುರಕ್ಷಿತ ಲ್ಯಾಂಡಿಂಗ್‍ಗಾಗಿ ಆರ್‍ಟಿಎಲ್ ವೈಶಿಷ್ಟ್ಯಗಳಂತಹ ಅಂತರ ನಿರ್ಮಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಮತ್ತು 30 ವರೆಗೆ ಆವರಿಸಬಹುದಾದ ಉತ್ತಮ ಗುಣಮಟ್ಟದ ನಳಿಕೆಗಳನ್ನು ಹೊಂದಿದೆ. ಹೀಗಾಗಿ ದಿನಕ್ಕೆ ಎಕರೆ ಗಟ್ಟಲೆ ಸಿಂಪಡಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ನಮೋ ಡ್ರೋನ್ ದೀದಿ ಯೋಜನೆಯು ಗ್ರಾಮೀಣ ಮಹಿಳೆಯರಿಗೆ ಡ್ರೋನ್ ಪೈಲಟ್‍ಗಳಾಗಿ ತರಬೇತಿ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಮತ್ತು ಸ್ಥಳೀಯ ಕೃಷಿ ಪೂರೈಕೆ ಸರಪಳಿಯ ಅವಿಭಾಜ್ಯ ಪಾಲುದಾರರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದರು. ಅಲ್ಲದೆ ನಮೋ ಡ್ರೋನ್ ದೀದಿ ಅಡಿಯಲ್ಲಿ ಮಹಿಳೆಯರು ತಮ್ಮ ಸ್ವಾವಲಂಬಿ ಜೀವನ ನಡೆಸಲು ಇದು ಒಳ್ಳೆ ಉದಾರಣೆ ಆಗಿದೆ, ಹೀಗಾಗಿ ಸ್ವ ಸಹಾಯದ ಮಹಿಳೆಯರಿಗೆ ವಿವರವಾಗಿ ತಿಳಿಸುವ ಮೂಲಕ ಮಹಿಳೆಯರಿಗೆ ಹುರಿದುಂಬಿಸಿ ಪೆÇ್ರೀತ್ಸಾಹ ನೀಡಿದರು,
ಡ್ರೋನ್ ಯಂತ್ರ ಪಡೆದ ಮಹಿಳೆ ಶೇಡೊಳ್ ಗ್ರಾಮ ಪಂಚಾಯತನ ಸಂಜೀವಿನಿ ಮಹಿಳಾ ಒಕ್ಕೂಟದ ಬಿಬಿ ಫಾತಿಮ ಸ್ವ-ಸಹಾಯ ಗುಂಪಿನ ಮಹಿಳೆ ಯಾಗಿದ್ದಾರೆ, ಜೈಶ್ರೀ ಚಿತ್ತಾನಂದ್ ಡ್ರೋನ್ ಪರವಾನಗಿ ಪಡೆದ ಪ್ರ-ಪ್ರಥಮ ಸ್ವಸಹಾಯ ಸಂಘದ ಮಹಿಳೆ ಯಾಗಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ್ ಡುಕ್ರೆ, ಉಪಾಧ್ಯಕ್ಷ ಸವಿತಾ ಗೌತಮ್, ಪಿಡಿಓ ರಾಜಶೇಖರ್ ಬುಳ್ಳ, ಲ್ಯಾಬ್ ಅಸಿಸ್ಟೆಂಟ್ ವೀರೇಶ್, ಜಿಲ್ಲಾ ವ್ಯವಸ್ಥಾಪಕ ಆಕಾಶ ಸ್ವಾಮಿ, ಕೃಷಿ ತಾಲ್ಲೂಕು ವ್ಯವಸ್ಥಾಪಕಿ ಅಶ್ವಿನಿ ನವೀನ್, ಯುವ ವೃತ್ತಿ ಪರ ಸಿದ್ದೇಶ್ ಪಾಟೀಲ್, ವಲಯ ಮೇಲ್ವಿಚಾರಕ ದಯಾನಂದ ಹಲಗೆ, ಇದ್ದರು.