ಸೇಡಂ,ಜು,06: ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದ ನಂತರ ನಾಳೆ ಮೊದಲ ಬಜೆಟ್ ಮಂಡನೆ ಇದ್ದು, ತಾಲೂಕಿನ ಶಾಸಕರು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಸೇಡಂ ಹಾಗೂ ಮಳಖೇಡಕ್ಕೆ ವಿಶೇಷ ಅನುದಾನ ತರುವರು ಎಂಬ ಭರವಸೆ ಕ್ಷೇತ್ರ ಜನರು ಇಟ್ಟಿದ್ದಾರೆ. ಸೇಡಂನಲ್ಲಿ ವಿಶೇಷವಾಗಿ, ಬಿ,ಎಡ್ ಕಾಲೇಜ್ ,ರಿಂಗ್ ರೋಡ್, ಅತ್ಯ ಅವಶ್ಯಕತೆ ಇದ್ದು ಅದರ ಜೊತೆಗೆ ಮಳಖೇಡ ಗ್ರಾಪಂಯು ತಾಲೂಕಿನಲ್ಲಿಯೇ ಹಾಗೂ ರಾಜ್ಯದಲ್ಲಿಯೇ ಅತಿ ದೊಡ್ಡ ಪಂಚಾಯತಿಯಾಗಿದ್ದು, ಇನ್ನುವರೆಗೂ ಮೇಲ್ದರ್ಜೆಗೇರಿಸದೆ ಗ್ರಾಮ ಪಂಚಾಯತಿಯಾಗಿ ಉಳಿದಿದ್ದು (ಪಟ್ಟಣ ಪಂಚಾಯಿತಿ) ಆಗುವುದರ ಜೊತೆಗೆ ರಾಷ್ಟ್ರಕೂಟರ ಕೋಟೆಯ ಅಭಿವೃದ್ಧಿ ಪ್ರವಾಸಿಗರನ್ನ ಆಕರ್ಷಿಸುವ ಸ್ಥಳವನ್ನಾಗಿ ಮಾಡಲು ವಿಶೇಷ ಅನುದಾನ, ಹಾಗೂ ಇದ್ದರೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ರೈತ ಸಂಪರ್ಕ ಕೇಂದ್ರ, ಗ್ರಾಂ ಲೆಕ್ಕಾಧಿಕಾರಿ ಕಚೇರಿ, ಉಪ ತಹಸೀಲ್ದಾರ್ ಕಚೇರಿ, ಸಮುದಾಯ ಆಸ್ಪತ್ರೆ ಮೇಲ್ದರ್ಜೆಗೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಈ ಬಜೆಟ್ ನಲ್ಲಿ ವಿಶೇಷ ಅನುದಾನ ತರಬೇಕಿದೆ ಎನ್ನುತ್ತಿದ್ದಾರೆ ಕ್ಷೇತ್ರದ ಜನರು, ಕಾದು ನೋಡಬೇಕಿದೆ ನಾಳೆಯ ಬಜೆಟ್ ನಲ್ಲಿ.