
ಕಲಬುರಗಿ:ಫೆ.28: ಆಕಾಶವಾಣಿಯಯಲ್ಲಿ ಮಾ. ಒಂದರಂದು ಬುಧವಾರ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಾ. ಬಸವರಾಜ್ ಪಾಟೀಲ್ ಸೇಡಂ ಅವರ ಜೊತೆ ನೇರ ಫೋನ್ ಇನ್ ಸಂವಾದ ಏರ್ಪಡಿಸಲಾಗಿದೆ.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ಈ ವರೆಗೆ ಮಾಡಿದ ಸಾಧನೆಯ ಹೆಜ್ಜೆಗಳನ್ನು ಕೇಳುಗರ ಜೊತೆ ಹಂಚಿಕೊಳ್ಳುವ ಈ ಕಾರ್ಯಕ್ರಮ ಇದಾಗಿದೆ. ಈ ಭಾಗದ ಅಭಿವೃದ್ಧಿಗೆ ಸಂಘವು ನೀಡಿದ ಕೊಡುಗೆಯ ಬಗ್ಗೆ ಸೇಡಂ ಅವರ ಜೊತೆ ಕೇಳುಗರು ಸಂವಾದ ನಡೆಸಬಹುದು.
ಆಸಕ್ತ ಕೇಳುಗರು ಕರೆ ಮಾಡಲು ದೂರವಾಣಿ ಸಂಖ್ಯೆ 2 9 5 9 8 6 ಮತ್ತು 2 9 5 9 8 7 ಎಸ್‌ಟಿಡಿ ಸಂಖ್ಯೆ 0 8 4 7 2 ಎಂದು ಕಾರ್ಯಕ್ರಮ ನಿರ್ಮಾಣ ಅಧಿಕಾರಿ ಡಾ. ಸದಾನಂದ ಪೆರ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ