ಸೇಡಂ: ಗ್ರಾಮೀಣ ವೈದ್ಯರ ಸದಸ್ಯತ್ವ ಅಭಿಯಾನ

ಸೇಡಂ,ಆ.4- ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುವ ವೈದ್ಯರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿಲಾಯಿತು.
ಗ್ರಾಮೀಣ ವೈದ್ಯರು ಸಂಘಟಿತರಾಗುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹರ ಕಂಡುಕೊಳ್ಳಲು ಮುಂದಾಗಬೇಕು ಎಂದು ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ದಿ ಸಂಘದ ಸಂಸ್ಥಾಪಕ ಅಧ್ಯಕ್ಷ ಅಮೃತ ಸಿ.ಪಾಟೀಲ ಅವರು ಕರೆ ನೀಡಿದರು.
ಸೇಡಂ ಪಟ್ಟಣದ ಹೊಟೆಲನಲ್ಲಿ ಕರೆದ ಸೇಡಂ ತಾಲೂಕು ಗ್ರಾಮೀಣ ವೈದ್ಯರ ಸಭೆ ಮತ್ತು ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ತಮ್ಮ ಕುಂದುಕೊರತೆಗಳ ಪರಿಹಾರ ಕಂಡುಕೊಳ್ಳಲು ಕಲ್ಯಾಣ ಕರ್ನಾಟಕ
ಗ್ರಾಮೀಣ ವೈದ್ಯರ ಅಭಿವೃದ್ಧಿ ಸಂಘವನ್ನು ಅಸ್ಥಿತ್ವಕ್ಕೆ ತರಲಾಗಿದೆ ಎಂದರು.
ಈ ನೂತನ ಸಂಘದ ನೆತೃತ್ವದ ನಿಯೋಗವೊಂದು ಈಗಾಗಲೇ ಆರೋಗ್ಯ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ನೆರೆಯ ಆಂಧ್ರ-ತೆಲಾಂಗಣ ಮಾದರಿಯಲ್ಲಿ ಇಲ್ಲಿನ ಗ್ರಾಮೀಣ ವೈದ್ಯರ ಮಾನ್ಯತೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಮನವಿಪತ್ರವನ್ನು ಸಲ್ಲಿಸಲಾಗಿದೆ ಎಂದರು.
ಸಂಘಟನೆಯ ವಿಭಾಗಿಯ ಉಪಾಧ್ಯಕ್ಷ ಮೊಹನ ಪವ್ಹಾರ ಮಾತನಾಡಿ, ನಗರ ಪ್ರದೇಶದ ದುಬಾರಿ ಬೆಲೆಯ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಜನರು ಪಡೆಯಲು ಸಾದ್ಯವಾಗುವುದಿಲ್ಲ. ಗ್ರಾಮೀಣರ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಅತಿ ಕಡಿಮೆ ಧರರಲ್ಲಿ ಚಿಕಿತ್ಸೆ ನೀಡುವ ಗ್ರಾಮೀಣ ವೈದ್ಯರ ಸೇವೆಗೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ನೂತನವಾಗಿ ಆಸ್ಥಿತ್ವಕ್ಕೆ ತಂದಿರುವ ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿ ಸಂಘವನ್ನು ಬಲಪಡಿಸುವ ಉದ್ದೇಶದಿಂದ ಆಯಾ ಘಟಕಗಳಿಗೆ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗುತ್ತಿದೆ ಸೇಡಂ ತಾಲೂಕು ಅಧ್ಯಕ್ಷರಾಗಿ ಆನಂದ ಪರೀಟ ಅವರು ಹೇಳಿದರು.
ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮೀಣ ವೈದ್ಯರಾದ ಮೋಹನ ಪವ್ಹಾರ, ಮಲ್ಲಿಕಾರ್ಜುನ ಕಲಕೇರಿ, ಬಸವರಾಜ ಆನಾಕಲ್, ಗುರು ನಂದಿಕೂರ, ಶರಣು ಪಾಣೆಗಾಂವ, ಗೊವಿಂದ ಭಟ್ಟ, ಶಿವಾನಂದ ಚಿಕೈಣೆ, ರಾಹುಲ್ ಮಾನಕರ, ವಿಕಾಸ ಆನಂದ ಪಿ, ಹಣಮಂತ ಇಂಚೆಳ್ಳಿ, ವಿಠಲ, ಅಶೋಕ, ಬಾಳು, ರಾಜು, ಬಸವರಾಜ ಶಿರೋಳ್ಳಿ, ರಮೇಶ ಶಿರೋಳ್ಳಿ, ಮಹಿಪಾಲರೆಡ್ಡಿ, ಬಸವರೆಡ್ಡಿ, ನಯಿಲ್ ಸಾಬ, ಬದ್ರಿಕುಮಾರ, ಶಿವರಾಜ ಸೇಡಂ ಹಾಗು ರವಿ ಒಂಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.