ಸೇಡಂ: ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಜಯಂತೋತ್ಸವ

ಸೇಡಂ,ಎ,05: ತಾಲೂಕಿನ ಊಡಗಿ ಗ್ರಾಮ ಪಂಚಾಯಿತಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನ ಮಂತ್ರಿ,ಸ್ವಾತಂತ್ರ ಹೋರಾಟಗಾರ,ರಾಷ್ಟ್ರ ನಾಯಕ,ನಿರಂತರವಾಗಿ ಶೋಷಿತರ ಮತ್ತು ದುರ್ಬಲರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕ ಡಾ.ಬಾಬು ಜಗಜೀವನ ರಾಮ್ ರವರ 114ನೇ ಜಯಂತೋತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ, ಮಾಲಾರ್ಪಣೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಿದರು.
ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷರಾದ ಹಣಮಂತ ಬೆನಕನಳ್ಳಿ ಊಡಗಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಪತ್ತಕುಮಾರ ಬಾಂಜಿ, ಸತೀಶ್ ಕುಮಾರ್ ಬಾಂಜಿ, ಮಹಾದೇವ ರೇವಣ್ಣಸಿದ್ದಪ ಶೇಕ ಉಸೆನ್ ನಾಗಪ್ಪ ಸರಡಗಿ , ನೀಲಕಂಠ ಟೆಂಗಳ್ಳಿ, ಅನೇಕರು ಇದ್ದರು.