ಸೇಡಂನ ಪತ್ರಕರ್ತರ ಪ್ರಭೆ ಗ್ರಂಥ ಲೋಕಾರ್ಪಣೆಗೊಳಿಸಿದ ಶಾಸಕ ತೇಲ್ಕೂರ

ಸೇಡಂ,ಜು,27 : ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕ ಘಟಕದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ “ಪತ್ರಕರ್ತರ ಪ್ರಭೆ” ಗ್ರಂಥ ಲೋಕಾರ್ಪಣೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಡಿಸಿಸಿ ಬ್ಯಾಂಕ್ ಯಾದಗಿರಿ ಮತ್ತು ಕಲಬುರಗಿ ಅಧ್ಯಕ್ಷರು ಸೇಡಂ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾಡುವರು.
ಈ ವೇಳೆಯಲ್ಲಿ ಪರಮಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ,ತೊಟ್ನಳ್ಳಿ ಮಹಾಂತೇಶ್ವರ ಮಠದ ಷ.ಬ್ರ.ಡಾ.ತ್ರೀಮೂರ್ತಿ ಶಿವಾಚಾರ್ಯರು,ಡಾ.ಬಸವರಾಜ ಪಾಟೀಲ್ ಸೇಡಮ್,ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಊಡಗಿ,ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ,ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಾಬುರಾವ ಯಡ್ರಾಮಿ, ಸಂಗಮನಾಥ ರೇವತಗಾಂವ್, ಸೇಡಂನ ಕಾರ್ಯನಿರತ ಪತ್ರಕರ್ತರ ಸಂಘದ ಘಟಕ ಅಧ್ಯಕ್ಷ ಶರಣು ಮಹಾಗಾಂವ,ಶಂಕರ್ ಕೊಡ್ಲಾ,ರಮೇಶ್ ಇಂಜಳ್ಳಿಕರ್,ದೇವಿಂದ್ರಪ್ಪ ಅವಂಟಿ, ಮಹಿಪಾಲರೆಡ್ಡಿ ಮುನ್ನೂರ್, ಜಗನ್ನಾಥ ತರನಳ್ಳಿ, ಶಿವಕುಮಾರ್ ನಿಡಗುಂದಾ, ಅವಿನಾಶ ಬೋರಂಚಿ, ನಾಗಯ್ಯಸ್ವಾಮಿ ಬೊಮ್ಮಳ್ಳಿ ಶರಣಯ್ಯಸ್ವಾಮಿ ಬೊಮ್ನಳ್ಳಿ, ಸಿದ್ದಯ್ಯಸ್ವಾಮಿ ಆಡಕಿ, ಬಿಜನಳ್ಳಿ ಸುರೇಶ್, ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ರಾಧಾಕೃಷ್ಣ ಕುಲಕರ್ಣಿ, ಸುನೀಲ್ ರಾಣಿವಲ್, ಸುಧೀರ ಬಿರಾದಾರ, ಮಾರುತಿ ಹೆಡಳಿಕರ್ , ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತ್ಯಗಳು, ಹಲವರು ಉಪಸ್ಥಿತರಿದ್ದರು.