ಸಂಜೆವಾಣಿ ವಿಶೇಷ ವರದಿ: ಬಿಜನಳ್ಳಿ ಸುರೇಶ್
ಸೇಡಂ, ಜೂ,17: 2 ಸಾವಿರ ವರ್ಷಗಳ ಇತಿಹಾಸ ಉಳ್ಳ ಕನ್ನಡ, ಅಮೋಘವರ್ಷ ನೃಪತುಂಗ ಅವಧಿಯಲ್ಲಿ ಕನ್ನಡ ಜನ್ಮ ತಾಳಿದ ಪುಣ್ಯಭೂಮಿ ಜಗತ್ಪ್ರಸಿದ್ಧ ವಾಗಿರುವ ಕ್ಷೇತ್ರ, ಕಲೆ, ಸಾಹಿತ್ಯ, ಸಾಂಸ್ಕøತಿಯ, ಗಣಿತ ಕಾವ್ಯ ವಿಮರ್ಶೆ ಹತ್ತು ಹಲವು ಕೇಂದ್ರಬಿಂದುವಾದ ರಾಷ್ಟ್ರಕೂಟರ ನಾಡಿನ ಇಂದು ಮಾನ ಮರ್ಯಾದೆ ಕಳೆದು ಬಿಟ್ಟಿರುವಂತಹ ವಿಚಿತ್ರವಾದ ಸುದ್ದಿ ಹೊರ ಬಿದ್ದಿದೆ. ಕೇಂದ್ರ ಬಿಂದುವಾದ ಇಲ್ಲಿ ಅಂದರೆ ಸೇಡಂನಲ್ಲಿ 11 ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿ ಬಡವರ ಮಕ್ಕಳು ಶಿಕ್ಷಣ ವಂಚಿತರನ್ನಾಗಿ ಮಾಡಲು ಖಾಸಗಿಯ ಶಿಕ್ಷಣ ಸಂಸ್ಥೆಯವರಿಗೆ ಒಪ್ಪಿಸಿಬಿಟ್ಟಿದ್ದಾರೆ ಎಂದು ಕಾಣಿಸುತ್ತಿದೆ ಕ್ಷೇತ್ರ ಶಿಕ್ಷಣ ಇಲಾಖೆ.
ಸೇಡಂ ತಾಲೂಕಿನ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿ ಯಲ್ಲಿ ಬರುವ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆ ಹೂವಿನಹಳ್ಳಿ ತಾಲೂಕ ಚಿಂಚೋಳಿ ಈ ಶಾಲೆ 5ನೇ ತರಗತಿವರೆಗೆ ಬಂದಿದ್ದು ಇಲ್ಲಿ ಕಳೆದ ಎರಡು ವರ್ಷದಿಂದ ಪರಮೆಂಟ್ ಶಿಕ್ಷಕರು ನೇಮಕಗೊಂಡಿರುವುದಿಲ್ಲ ಅಕ್ಕಪಕ್ಕದ ಊರುಗಳ ಒಬ್ಬರು ಶಿಕ್ಷಕರಿಗೆ ನಿಯೋಜನಗೊಳಿಸಿದರು ಹಾಗೂ ಒಬ್ಬರ ಅತಿಥಿ ಶಿಕ್ಷಕರಿಗೆ ನೇಮಕಗೊಳಿಸಿದರು ಪ್ರಸ್ತುತ ವರ್ಷ ಜುಲೈ ಒಂದರಿಂದ ಯಾವುದೇ ಶಿಕ್ಷಕರು ಶಾಲೆಗೆ ಬರದ ಕಾರಣ ಐದನೇ ತರಗತಿ ಉತ್ತೇಣರಾದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮೂಲ ಪ್ರತಿ ನೀಡಲು ಹಾಗೂ ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಯಾವುದೇ ಶಿಕ್ಷಕರು ಇರುವುದಿಲ್ಲ ಅತಿಥಿ ಶಿಕ್ಷಕರಿಗೆ ಈ ಮೇಲಿನ ಕ್ರಮಗೊಳ್ಳಲು ಯಾವುದೇ ಅಧಿಕಾರ ಇರದ ಕಾರಣ ಸ್ಥಳೀಯರು ಹಾಗೂ ಊರಿನ ಮುಖಂಡರು ಶಾಲೆಗೆ ಬೇಗ ಹಾಕಿರುತ್ತಾರೆ ಎಂದು ಬಲ ಮೂಲಗಳಿಂದ ತಿಳಿದುಬಂದಿದೆ. ಸಂಬಂಧಪಟ್ಟ ಇಲಾಖೆಯವರು ಇಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂಬುದು ಕಾದುನೋಡಬೇಕಿದೆ.