ಸೇಡಂನಲ್ಲಿ ಹೆಚ್ಚುತ್ತಿವೆ ಬೈಕ್, ಮನೆಗಳ ಕಳ್ಳತನ: ತಡೆಯುವಂತೆ ಪೆÇಲೀಸ್ ಇಲಾಖೆಗೆ ಮನವಿ

ಸೇಡಂ, ಎ,25: ಪಟ್ಟಣದಲ್ಲಿ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಇತ್ತ ಬಸ್ ನಿಲ್ದಾಣ, ಮನೆಗಳ ಮುಂದೆ ನಿಲ್ಲಿಸಿರುವ ಬೈಕುಗಳನ್ನು ಖದೀಮರು ಬೆಳಗಾಗುವಷ್ಟರಲ್ಲಿ ಕೈಚಳಕ ತೋರಿಸುವುದರ ಜೊತೆಗೆ ಮನೆಗಳ ಕಳ್ಳತನ ಹೆಚ್ಚಳವಾಗುತ್ತಿದೆ ಎಂದು ಬೈಕ್, ಕಳೆದುಕೊಂಡವರು ಸಂಜೆವಾಣಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿವೆ. ಎಚ್ಚೆತ್ತುಕೊಳ್ಳಬೇಕಿದೆ ಸಾರ್ವಜನಿಕರು. ದ್ವಿಚಕ್ರ ವಾಹನ ಕಳೆದುಕೊಂಡ ಸವಾರರು ಪೆÇಲೀಸ್ ಠಾಣೆಗೆ ತೆರಳಿದರೆ ಸಿಬ್ಬಂದಿ ವರ್ಗದವರು ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ ದೂರು ದಾಖಲಿಸಿಕೊಳ್ಳುತ್ತಿಲ್ಲ , ತಿಳಿದವರು ಆನ್ಲೈನ್ ಮುಖಾಂತರ ಕಳ್ಳತನದ ದೂರು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಎಸ್ ಬಿ ಐ ಬ್ಯಾಂಕ್, ಬಸ್ಟಾಂಡ್, ಕಿರಣ್ ಬಜಾರ್ಗಳಲ್ಲಿ ರಸ್ತೆಯಲ್ಲಿ, ಎಲ್ಲಂದರಲ್ಲಿ, ದ್ವಿಚಕ್ರ ವಾಹನ ನಿಲ್ಲಿಸಿ ಹೋಗುವುದರಿಂದ ಕಳ್ಳತನವಾಗುತಿವೆ ಎನ್ನುತ್ತಿದ್ದಾರೆ ಸಾರ್ವಜನಿಕರು, ಪಟ್ಟಣದಲ್ಲಿ ದ್ವಿಚಕ್ರವಾಹನ ಪಾಕಿರ್ಂಗ್ ವ್ಯವಸ್ಥೆ ಜೊತೆಗೆ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಬೇಕಿದೆ.

ಸೇಡಂ ಪೆÇಲೀಸ್ ರಲ್ಲಿ ವಿನಂತಿ ನಗರದಲ್ಲಿ ಕಳ್ಳತನ ಅವ್ಯಾಹತವಾಗಿ ನೆಡೆಯುತ್ತಿವೆ, ಮನೆ ಕಳ್ಳತನ, ದ್ವಿಚಕ್ರ ವಾಹನಗಳ ಕಳ್ಳತನ ಹೆಚ್ಚುತ್ತಿದ್ದು ಚುನಾವಣೆ ಜೊತೆಗೆ ಕಳ್ಳರನ್ನು ಹಿಡಿಯಲು ದಯವಿಟ್ಟು ಪೆÇಲೀಸ್ ಇಲಾಖೆಯ ಅಧಿಕಾರಿಗಳು ಮುಂದಾಗುವ ಮೂಲಕ ನಾಗರಿಕರಿಗೆ ರಕ್ಷಣೆ ನೀಡಬೇಕಿದೆ.