ಸೇಡಂನಲ್ಲಿ ಸರಕಾರಿ ನೂತನ ಬಿ.ಇಡಿ ಕಾಲೇಜು ಆರಂಭಿಸಲು ಎನ್.ಎಸ್.ಯು.ಐ ವತಿಯಿಂದ ಸಚಿವರಿಗೆ ಮನವಿ

ಸೇಡಂ,ಜೂ,10: ತಾಲೂಕಿನಲ್ಲಿರುವ ಸಾಕಷ್ಟು ಯುವಕ-ಯುವತಿಯವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ, ಹಳ್ಳಿ ಹಳ್ಳಿಗಳಿಂದ ಸಾಕಷ್ಟು ಉನ್ನತ ಮಟ್ಟದ ಶಿಕ್ಷಣವನ್ನು ಹೊಂದಿದ್ದು, ಮೂಲಭೂತ
ಸೌಕರ್ಯಗಳು ಇಲ್ಲದಂತಾಗಿದೆ, ಸಾಕಷ್ಟು ವರ್ಷಗಳಿಂದ ಈ ಸಮಸ್ಯೆಗಳನ್ನು ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ, ನಗರಕ್ಕೆ ಒಂದು ಸುಸಜ್ಜಿತವಾದ ಸರಕಾರಿ ಬಿ.ಇಡಿ ಕಾಲೇಜು ಒದಗಿಸಲು ಕೇಳಿಕೊಳ್ಳುತ್ತೇವೆ,
ಬಹಳಷ್ಟು ಪದವಿ ಮುಗಿಸಿಕೊಂಡು ವಿದ್ಯಾರ್ಥಿಗಳು ಬಿ.ಇಡಿ ಪದವಿಗಾಗಿ ಕಲಬುರಗಿ ಮತ್ತು ಚಿತ್ತಾಪುರಕ್ಕೆ ಹೋಗಬೇಕಾಗಿದೆ ಹಾಗಾಗಿ ಪಟ್ಟಣಕ್ಕೆ ಒಂದು ಸರಕಾರಿ ಬಿ.ಇಡಿ ಕಾಲೇಜು ಒದಗಿಸಲು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸೇಡಂನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಹೆಚ್ಚಿನ ಬೋಧಕ ಸಿಬ್ಬಂದಿಯನ್ನು ಒದಗಿಸಲು ಕೋರಿಕೆ, ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಗರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಪದವಿ ಪೂರ್ವ ಮಹಿಳಾ ಕಾಲೇಜು
ಒದಗಿಸಲು ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಕೋಣೆಗಳ
ಸಂಖ್ಯೆ ಹೆಚ್ಚಿಸಬೇಕು,ನಗರಕ್ಕೆ ಒಂದು ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯ ಅಂದರೆ, ಬೃಹತ್ ಸಾರ್ವಜನಿಕ
ಗ್ರಂಥಾಲಯ ಒದಗಿಸಲು ಕೇಳಿಕೊಳ್ಳುತ್ತೇವೆ.

  1. ಹಳ್ಳಿ ಹಳ್ಳಿಗಳಿಂದ ಸೇಡಂ ನಗರಕ್ಕೆ ಓದಲು ಬರುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ಸುಗಳ ವ್ಯವಸ್ಥೆ ಕಲ್ಪಿಸಲು ಕೋರಿಕೆ. ಸೇಡಂನಿಂದ ಕಲಬುರಗಿಗೆ ತೆರಳುವ ಬಸ್ಸುಗಳ ಸಂಖ್ಯೆ ಇನ್ನು ಹೆಚ್ಚಿಗೆ ಆಗಬೇಕು, ಬೆಳಗ್ಗೆ ಸಮಯದಲ್ಲಿ ಹೆಚ್ಚಿನ ಬಸ್ಸುಗಳ ವ್ಯವಸ್ಥೆ ಆಗಬೇಕು ಪ್ರಥಮ ದರ್ಜೆ ಕಾಲೇಜು ಸೇಡಂ ಗ್ರಂಥಾಲಯದಲ್ಲಿ ನೂತನ ಪಠ್ಯಕ್ರಮ ಸಂಬಂಧಿಸಿದಂತೆ ಪುಸ್ತಕಗಳು ಲಭ್ಯವಿರುವುದಿಲ್ಲ, ಸದರಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಪುಸ್ತಕಗಳು ಒದಗಿಸಲು ಮೇಲ್ಕಂಡ ಸಮಸ್ಯೆಗಳು ಮತ್ತು ಅವಶ್ಯಕತೆಗಳು ನಗರಕ್ಕೆ ಮತ್ತು ತಾಲೂಕಿನ ಗ್ರಾಮಗಳಿಗೆ ಯುವಕ-ಯುವತಿಯರಿಗೆ, ಶಾಲಾ ಕಾಲೇಜುಗಳ ಮಕ್ಕಳಿಗೆ ಅಗತ್ಯವಾಗಿದ್ದು, ಮೇಲಿನ ಬೇಡಿಕೆಗಳಿಗೆ
    ಆದಷ್ಟು ಬೇಗ ಪರಿಹಾರ ನೀಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ, ಈ ವೇಳೆಯಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ರಾಹುಲ್ ಊಡಗಿ, ಶಾಬೋದ್ದೀನ್ ಸಂಗಾವಿ ಇದ್ದರು.