ಸೇಡಂನಲ್ಲಿ ಶೇ.91 ರಷ್ಟು ಹಿರಿಯ, ವಿಶೇಷಚೇತನರ ಮತದಾನ:ತಹಸಿಲ್ದಾರ್ ಶಿವಾನಂದ ಮೇತ್ರೆ

ಸೇಡಂ,ಎ,27: ಲೋಕಸಭಾ ಚುನಾವಣೆ ಅಂಗವಾಗಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆಗೆ ತಹಸಿಲ್ದಾರ್ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಸೇಡಂ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 291 ರಲ್ಲಿ 200 ಹಿರಿಯ ನಾಗರಿಕರು, 91 ವಿಶೇಷಚೇತನರು ಮತದಾನ ಮಾಡಿದ್ದು ಮೊದಲ ದಿನವೇ ಶೇ.91%ರಷ್ಟು ಮತದಾನವಾಗಿದೆ ಎಂದು ತಹಸಿಲ್ದಾರ್ ಶಿವಾನಂದ ಮೇತ್ರೆ ತಿಳಿಸಿದರು. ಈ ವೇಳೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಪತಿ ರಾಜು, ಹಾಗೂ ಪೆÇಲೀಸ್ ಸಿಬ್ಬಂದಿ ಚುನಾವಣಾ ಸಿಬ್ಬಂದಿ ವರ್ಗದವರು ಇದ್ದರು.