ಸೇಡಂನಲ್ಲಿ ಡಾ. ಪಾಟೀಲ್ ಗೆಲುವು ಕಾರ್ಯಕರ್ತರಿಂದ ಅಧ್ಯಕ್ಷರಿಗೆ ಸನ್ಮಾನ

ಸೇಡಂ, ಮೇ,14: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಕಾಂಗ್ರೆಸ್ ಅಭ್ಯರ್ಥಿ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಿವಶರಣ ರೆಡ್ಡಿ ಪಾಟೀಲ್ ಅವರಿಗೆ ಕಾರ್ಯಕರ್ತರು ಸನ್ಮಾನಿಸಿ ಸಿಹಿ ತಿನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು. ಈ ವೇಳೆಯಲ್ಲಿ ಅಬ್ದುಲ್ ರಶೀದ್, ಜನಾರ್ದನ್ ರೆಡ್ಡಿ, ಸಾಹೇಬೂದ್ದೀನ್, ಶಂಕರ್, ಶಿವು ಸೇರಿದಂತೆ ಅನೇಕರು ಇದ್ದರು.