
ದಾವಣಗೆರೆ. ಮಾ.೨೦; ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ರತ್ನ ದಿವಂಗತ ಪುನೀತ್‌ರಾಜ್‌ಕುಮಾರ್ ಜನ್ಮದಿನವನ್ನು ‘ಸ್ಫೂರ್ತಿದಿನ’ ವೆಂದು ಆಚರಿಸಲಾಯಿತು. ಪರಿಮಳಭರಿತ ಪುಷ್ಪಗುಚ್ಚಗಳನ್ನು ಪುನೀತ್ ರಾಜ್‌ಕುಮಾರ ಭಾವಚಿತ್ರಕ್ಕೆ ಅರ್ಪಿಸುವ ಮೂಲಕ ‘ಸ್ಫೂರ್ತಿದಿನ’ ಕ್ಕೆ ಚಾಲನೆ ನೀಡಲಾಯಿತು.ವಿದ್ಯಾರ್ಥಿಗಳು ಪುನೀತ್‌ರಾಜ್‌ಕುಮಾರ್ ಆದರ್ಶಗಳನ್ನು ಮೆಲುಕು ಹಾಕುತ್ತ, ಅಪ್ಪು ವಿರಚಿತ ಹಾಡುಗಳನ್ನು ಹಾಡುತ್ತ ಪುನೀತಾ ನೀನು ನಮ್ಮ ಸ್ವಂತ ಎಂಬ ಘೋಷಣೆಗಳನ್ನು ಹಾಕಿದರು. ದೊಡ್ಡನೆ ಹುಡುಗನ ಸಾಹಸ, ತ್ಯಾಗದ ಗುಣಗಳ ಬಗ್ಗೆ ಕು.ಯಶಸ್ವಿ ಜಿ.ಸಿ. ಯವರು ಮಾತನಾಡಿದರು. ಸಂಸ್ಥೆಯ ಶಿಕ್ಷಕಿಯರು ಅಪ್ಪು ನಟಿಸಿದ ಚಲನಚಿತ್ರದ ಗೀತೆಗಳನ್ನು ಮೆಲುಕು ಹಾಕಿದರು.ಈ ಕಾರ್ಯಕ್ರಮದ ಮುಖ್ಯ ಅತಿಥ್ಯ ಮತ್ತು ಅಧ್ಯಕ್ಷತೆಯನ್ನು ವಹಿಸಿದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ಶಾಲಾ ಖಜಾಂಚಿಗಳಾದ ಪ್ರವೀಣ್ ಹುಲ್ಲುಮನೆ, ವಿದ್ಯಾರ್ಥಿಗಳಿಗೆ ಪುನೀತ್‌ರಾಜ್ ಕುಮಾರರವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಢಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಹೆಚ್ ಅನಿಲ್ ಕುಮಾರ್ ರವರು ಹಾಗೂ ಶಾಲೆಯ ಕಾರ್ಯದರ್ಶಿಗಳು ಆದ ಶ್ರೀಯುತ ಟಿ.ಎಂ. ಉಮಾಪತಯ್ಯನವರು ಮತ್ತು ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮದ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಂತೋಷದಿಂದ ಪಾಲ್ಗೊಂಡಿದ್ದರು.’ಸ್ಫೂರ್ತಿದಿನ’ ದ ಅಂಗವಾಗಿ ವಿದ್ಯಾ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.