ದಾವಣಗೆರೆ. ಜೂ.೨೫; ನಗರದ ಸೇಂಟ್‌ಜಾನ್ಸ್ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ 9 ನೇ ಅಂತರಾಷ್ಟೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ. ಪತಂಜಲಿ ಯೋಗ ಶಿಕ್ಷಣ ಸಮಿತಿಯ ರಾಮಚಂದ್ರ ಅಣ್ಣಾಜಿಯವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಲಾಯಿತು. ವಿದ್ಯಾರ್ಥಿಗಳು ತಮ್ಮ ದಿನಚರಿಯಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಹೆಚ್.ಅನಿಲ್ ಕುಮಾರ್, ಕಾರ್ಯದರ್ಶಿಗಳಾದ ಉಮಾಪತಯ್ಯ ಹಾಗೂ ಖಜಾಂಚಿಗಳಾದ ಪ್ರವೀಣ್ ಹುಲ್ಲುಮನೆಯವರು ಹಾಗೂ ಪ್ರಾಂಶುಪಾಲರಾದ ಸಯ್ಯದ್ ಆರಿಫ್ ಆರ್. ಹಾಗೂ ಶ್ರೀಮತಿ ಪ್ರೀತಾ.ಟಿ.ರೈ, ಉಪಪ್ರಾಂಶುಪಾಲರಾದ ನೇತ್ರಾವತಿ ಹಾಗು ಶಿಕ್ಷಕವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.