
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೯; ಗುರುವೆಂದರೆ ಕೇವಲ ವ್ಯಕ್ತಿಯಲ್ಲ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ ಎಂಬಂತೆ ಗುರುಪೂರ್ಣಿಮೆಯ ಅಂಗವಾಗಿ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಮಾತಾ- ಪಿತೃಗಳ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಂಸ್ಥೆಯ ಕಾರ್ಯದರ್ಶಿಗಳಾದ ಟಿ. ಎಂ .ಉಮಾಪತಯ್ಯ ಅವರು ಮಾತಾಪಿತೃಗಳ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಇಂದಿನ ಮಕ್ಕಳಿಗೆ ಗುರು ಹಿರಿಯರಲ್ಲಿ ಗೌರವ ಭಾವನೆ ಕಡಿಮೆಯಾಗುತ್ತಿದ್ದು, ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳ ಕೊರತೆ ಕಾಣುತ್ತಿದ್ದು, ಬಾಲ್ಯದಿಂದಲೇ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಸಚ್ಚಾರಿತ್ರ್ಯವನ್ನು ರೂಢಿಸಿ ಉತ್ತಮ ಪ್ರಜೆಗಳಾಗುವಂತೆ ಬೆಳೆಸಿ ಎಂದು ಸಲಹೆ ನೀಡಿದರು.ಗುರುವಿನ ಸಮ್ಮುಖದಲ್ಲಿ ಮುದ್ದು ಮಕ್ಕಳು ಪೂಜಾ ವಿಧಿ ವಿಧಾನಗಳ ಮೂಲಕ ತಮ್ಮ ತಂದೆ ತಾಯಿಗಳ ಚರಣಗಳಿಗೆ ಪೂಜೆಯನ್ನು ಸಲ್ಲಿಸಿ, ಪೋಷಕರಿಂದ ಆಶೀರ್ವಾದವನ್ನು ಪಡೆಯುವುದರ ಮೂಲಕ ಸನಾದಿ ಸಂಸ್ಕೃತಿಯನ್ನು ಸಾರವನ್ನು ಕಣ್ಮುಂದೆ ತಂದರು.ಈ ಸನ್ನಿವೇಶದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಸಯ್ಯದ್ ಆರಿಫ್ ಆರ್, ಪ್ರೀತಾ.ಟಿ., ಉಪಪ್ರಾಂಶುಪಾಲರಾದ ನೇತ್ರಾವತಿ ಹಾಗೂ ಶಿಕ್ಷಕವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.