ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಪುರುಷರ ದಿನ

ಸಂಜೆವಾಣಿ ವಾರ್ತೆ

ದಾವಣಗೆರೆ.ನ.೨೩; ನಗರದ ಸೇಂಟ್‌ಜಾನ್ಸ್ ವಿದ್ಯಾಸಂಸ್ಥೆಯಲ್ಲಿ “ ಅಂತರಾಷ್ಟ್ರೀಯ ಪುರುಷರ ” ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿಹಾಡಿತು. ಎಲ್ಲಾ ಶಿಕ್ಷಕಿಯರು ಸೇರಿ , ಈ ವಿದ್ಯಾಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರುಷರನ್ನು ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ರಂಜಿಸಲಾಯಿತು. ಪುರುಷರ ಮಹತ್ವವನ್ನು ಸಾರುತ್ತಾ “ಪುರುಷರಿಗು ಮಹಿಳೆಯರಂತೆ ತಮ್ಮ ಭಾವನೆಗಳನ್ನು , ಕಷ್ಟ ಸುಖಗಳನ್ನು ಹಂಚಿಕೊಳ್ಳುಲು ಮುಕ್ತ ಅವರುಗಳನ್ನು ಇಂದಿನ ಸಮಾಜದಲ್ಲಿ ಕಲ್ಪಿಸಿ ಕೊಡಬೇಕಾಗಿದೆ ಎಂದು ನುಡಿದರು. ನಂತರ ಎಲ್ಲಾ ಪುರುಷರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ  ಹೆಚ್. ಅನಿಲ್ ಕುಮಾರ್ , ಕಾರ್ಯದರ್ಶಿಗಳಾದ  ಟಿ ಎಂ ಉಮಾಪತಯ್ಯ ಹಾಗೂ ಖಜಾಂಚಿಗಳಾದ  ಪ್ರವೀಣ್ ಹುಲ್ಲುಮನೆ ಪ್ರಾಂಶುಪಾಲರಾದ  ಸಯ್ಯದ್ ಆರಿಫ್ ಆರ್ ಹಾಗೂ  ಪ್ರೀತಾ.ಟಿ.ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ, ಶಿಕ್ಷಕವೃಂದದವರು ಉಪಸ್ಥಿತರಿದ್ದರು.