ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಸಡಗರ

ಸಂಜೆವಾಣಿ ವಾರ್ತೆ

ದಾವಣಗೆರೆ. ಸೆ.೧೭; ಸೇಂಟ್‌ಜಾನ್ಸ್ ವಿದ್ಯಾಸಂಸ್ಥೆಯ ಶಾಲಾ ಆವರಣದಲ್ಲಿ ‘ಗೌರಿ ಗಣೇಶ’ ಹಬ್ಬದ ಸಂಭ್ರಮ ಸಡಗರ ತುಂಬಿತ್ತು. ಮಕ್ಕಳು ಜೇಡಿ ಮಣ್ಣಿನ ವಿವಿಧ ಭಂಗಿಯ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಿದ್ದರು ಭಾದ್ರಪದ ಮಾಸದಲ್ಲಿ ಆಚರಿಸುವ ಈ ಗೌರಿ ಗಣೇಶ ಹಬ್ಬ ಕೇವಲ ಸಾಂಪ್ರಾದಾಯಿಕ ಆಚರಣೆ ಆಗಿರದೇ ಎಲ್ಲರೂ ಒಗ್ಗೂಡಿ ಒಂದೆಡೆ ಸೇರಿ ಪರಸ್ಪರ ಪ್ರೀತಿ, ಸಹಕಾರ, ಸಹಬಾಳ್ವೆಯನ್ನು ಮೆರೆಯುವುದಾಗಿದೆ. ವಿದ್ಯಾಗಣಪತಿಯನ್ನು ಮತ್ತು ಗೌರಿಯನ್ನು ಪ್ರತಿಷ್ಟಾಪಿಸಿ ಬಗೆ ಬಗೆಯ ಹೂಗಳಿಂದ ತಮ್ಮ ಪ್ರಿಯ ಗಣಪನನ್ನು ಅಲಂಕರಿಸುವುದರ ಮೂಲಕ ವಿದ್ಯಾರ್ಥಿಗಳು ಭಕ್ತಿಯನ್ನು ವ್ಯಕ್ತಪಡಿಸಿದರು. ಮಕ್ಕಳು ತಯಾರಿಸಿದ ಗಣೇಶನ ಮೂರ್ತಿಗಳನ್ನು ಸೇಂಟ್‌ಜಾನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಚ್ ಅನಿಲ್ ಕುಮಾರರವರು ಕರ‍್ಯರ‍್ಶಿಗಳಾದ ಶ್ರೀಯುತ ಟಿ ಎಂ ಉಮಾಪತಯ್ಯರವರು ಖಜಾಂಚಿಗಳಾದ ಪ್ರವೀಣ್ ಹುಲ್ಲುಮನೆರವರುತುಂಬಾ ಉತ್ಸಾಹದಿಂದ ವೀಕ್ಷಿಸಿದರು. ಈ ಸನ್ನಿವೇಶದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ  ಸಯ್ಯದ್ ಆರಿಫ್ ಆರ್.  ಹಾಗೂ ಶ್ರೀಮತಿ ಪ್ರೀತಾ.ಟಿ.ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ  ಹಾಗು ಶಿಕ್ಷಕ, ಶಿಕ್ಷಕೇತರ ವೃಂದದವರು , ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.