ಸೆ.8 ರಂದು 3ನೇ ರಾಜ್ಯ ಮಟ್ಟದ ರ್ಯಾಕಿಂಗ್ ಸ್ಪರ್ಧೆ

ಕಲಬುರಗಿ,ಸೆ.5- ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನೆತೃತ್ವದಲ್ಲಿ ಇಲ್ಲಿನ ಕಲಬುರಗಿ ಜಿಲ್ಲಾ ರೋಲರ್ ಸ್ಕೇಟಿಂಗ ಅಸೋಸಿಯೇಷನ್ ಇದೇ ಸೆ.8, ರಂದು 3 ನೇ ರಾಜ್ಯ ಮಟ್ಟದ ರ್ಯಾಕಿಂಗ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ಮಹಾನಗರದ ಕೆ.ಐ.ಎ.ಡಿ 3 ಫೇಸ್ ಎಕ್ಸಟೇಷನ್ ಕಪನೂರ ಕೈಗಾರಿಕ ಪ್ರದೇಶದಲ್ಲಿಒ ನಡೆಯಲಿದ್ದು, ಇದರಲ್ಲಿ ರಾಜ್ಯದ 19 ಜಿಲ್ಲೆಗಳ ಸ್ಕೇಟಿಂರಗಳು ಭಾಗ ವಹಿಸಲಿದ್ದಾರೆ ಎಂದು ಎಂಎಲ್‍ಸಿ ಶಶೀಲ ಜಿ.ನಮೋಶಿ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹೇಳಿದರು.
ಇದು ಕಲಬುರಗಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಪ್ರ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಸ್ಪರ್ಧೆಯಾಗಿದೆ.
ಈಗಾಗಲೇ ಕಲಬುರಗಿಯಲ್ಲಿ ಸುಮಾರು 300ಕ್ಕಿ ಹೆಚ್ಚು ಸ್ಕೆಟರಗಳು ದಿನ ನಿತ್ಯ ತರಬೇತಿ ಪಡೆಯುತ್ತಿದ್ದಾರೆ. ಈನಮ್ಮ ಭಾಗದಲ್ಲಿ ಇಂತಹ ಕ್ರೀಡೆಯನ್ನು ಜನಪ್ರಿಯ ಗೊಳಿಸಲು ಈ ಹಿಂದಿನ ನಮ್ಮ ಸರ್ಕಾರ ಅವಧಿಯಲ್ಲಿ ತಾವು ಅಂದರೆ ಶಶೀಲ ಜಿ.ನಮೋಶಿ ಅವರು, ಹೆಚ್ಚಿನ ಕÁಳಜಿ ವಹಿಸಿ ಅಟಲ್ ಬಿಹಾರಿ ವಾಜಪೇಯಿ ಬಡವಾಣೆ ಕೂಟನೂರ (ಡಿ) ಕಲಬುರಗಿಯಲ್ಲಿ 2 ಎಕರೆ 30 ಗುಂಟೆ ಸ್ಥಳವನ್ನು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲು ನಿರ್ಣಯ ಮಾಡಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ, ಹೆಚ್.ಆರ್ ರವಿಶ್, ವಿಕ್ರಮ ದರ್ಶನಾಪೂರ ಜಂಟಿ ಕಾರ್ಯದರ್ಶಿಗಳು, ಜೈಕುಮಾರ ಕಾರ್ಯದರ್ಶಿಗಳು ಹಾಗು ಶ್ರೀಮತಿ ಸ್ಮ್ರುತಿ ರಾಷ್ಟ್ರೀಯ ರೆಫರಿ ಪಾಲ್ಗೊಂಡಿದ್ದರು.