ಸೆ.5 ರಿಂದ ಭಾರತ ಯಾತ್ರೆ


ಧಾರವಾಡ,ಸೆ.1: ಶಿಕ್ಷಕರ ಮತ್ತು ಶೈಕ್ಷಣಿಕ ವಲಯದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ಸೆಪ್ಟೆಂಬರ್ 5 ರಿಂದ ಅಕ್ಟೋಬರ್ ವರೆಗೆ ಭಾರತ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ ಪಿಎಸ್ ಬಿಟ್ಟು ಓಪಿಎಸ್ ಜಾರಿ, ಏಕರೂಪ ವೇತನ ಶ್ರೇಣಿ, ಅತಿಥಿ ಶಿಕ್ಷಕರ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದು ಎಂದರು.
ಎಐಪಿಟಿಎಫ್ ಅಧ್ಯಕ್ಷ ರಾಮಪಾಲ ಸಿಂಗ್, ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಮಹಾ ಪ್ರದಾನ ಕಾರ್ಯಾಧ್ಯಕ್ಷ ಕಮಲಕಾಂತ ತ್ರಿಪಾಠಿ, ಖಜಾಂಚಿ ಹರಿಗೋವಿಂದನ್ ಅವರ ನೇತೃತ್ವದಲ್ಲಿ ಯಾತ್ರೆಯು ನಾಲ್ಕು ತಂಡಗಳಲ್ಲಿ ಸಂಚರಿಸಲಿದೆ.
ಯಾತ್ರೆಯು ರಾಜ್ಯಕ್ಕೆ ಸೆ. 17ಕ್ಕೆ ಪ್ರವೇಶ ಮಾಡಲಿದ್ದು, ವಿವಿಧ ಜಿಲ್ಲೆ ಮೂಲಕ ಮೆರವಣಿಗೆ ಸಾಗಲಿದೆ. ದೆಹಲಿಗೆ ತೆರಳಿ ಪ್ರತಿಭಟನೆ ಅಂತ್ಯವಾಗಲಿದೆ ಎಂದರು.
ಆದ್ದರಿಂದ ಶಿಕ್ಷಕರು ಅಧಿಕ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸಂಘದ ಉಪಾಧ್ಯಕ್ಷ ವೈ.ಎಚ್.ಬಣವಿ, ಜಿಲ್ಲಾ ಅಧ್ಯಕ್ಷ ವಿ.ಎಫ್.ಚುಳಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಜಿಲ್ಲಾ ಉಪಾಧ್ಯಕ್ಷ ರಮೇಶ ಲಿಂಗದಾಳ ಇತರರು ಸುದ್ದಿಗೋಷ್ಠಿಯಲ್ಲಿದ್ದರು.