
ಕಲಬುರಗಿ,ಸೆ.02: 2022-23ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚಾರಣೆ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರು ತಿಳಿಸಿದ್ದಾರೆ.
ಪ್ರಾಥಮಿಕ ವಿಭಾಗದಿಂದ-16 ಜನ ಶಿಕ್ಷಕರಿಗೆ ಹಾಗೂ ಪ್ರೌಢ ವಿಭಾಗದಿಂದ-08 ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿ ಪಡೆದ ಶಿಕ್ಷಕ, ಶಿಕ್ಷಕರಿಯಗೆ ಮೇಲ್ಕಂಡ ದಿನಾಂಕದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ2023-24ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ/ಶಿಕ್ಷಕಿಯರ ಪ್ರಶಸ್ತಿ ಪುರಸ್ಕøತ ಶಿಕ್ಷಕ, ಶಿಕ್ಷಕಿಯರ ಪಟ್ಟಿ ಇಂತಿದೆ.
ಪ್ರಾಥಮಿಕ ವಿಭಾಗ:- ಆಳಂದ ತಾಲೂಕಿನ ದಣ್ಣೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶೈಲಜಾ ಜೋಶಿ, ಆಳಂದ ತಾಲೂಕಿನ ಆಳಂದ ವಿವೇಕ ವರ್ಧನಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಪ್ಪಾ ಸಾಹೇಬ ತೀರ್ಥ, ಅಫಜಲಪೂರ ತಾಲೂಕಿನ ಚಿಣಮಗೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಲಾಲಬೀ ಎಸ್. ನದಾಫ್, ಅಫಜಲಪೂರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಸಹ ಶಿಕ್ಷಕ ಮಹ್ಮದ ಇಲಿಯಾಸ್, ಚಿತ್ತಾಪೂರ ತಾಲೂಕಿನ ಬರಗಾಲಗೇರಿ ರಾವೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶಿವಲಿಂಗಮ್ಮ, ಚಿತ್ತಾಪೂರ ತಾಲೂಕಿನ ಹೊಸೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಜಗನ್ನಾಥ ಬಡಿಗೇರ, ಚಿಂಚೋಳಿ ತಾಲೂಕಿನ ಕೊಂಚಾವರಂ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಹೇಶ ಕುಮಾರ,
ಕಲಬುರಗಿ ಉತ್ತರ ವಲಯ ಕಮಲಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನೇತ್ರಾವತಿ ಎಸ್ ರಾಂಪೂರೆ, ಕಲಬುರಗಿ ಉತ್ತರ ವಲಯದ ವೆಂಕಟಬೆನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮೃತ್ಯುಂಜಯ ಹಿರೇಮಠ, ಕಲಬುರಗಿ ದಕ್ಷಿಣ ವಲಯದ ಇಟ್ಟಂಗಿ ಭಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಸವರಾಜ ಸಜ್ಜನ, ಕಲಬುರಗಿ ದಕ್ಷಿಣ ವಲಯದ ಶ್ರೀನಿವಾಸ ಸರಡಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ತಸ್ಲಿಮ ವಡಗೇರಿ, ಕಲಬುರಗಿ ದಕ್ಷಿಣ ವಲಯದ ಪಟ್ಟಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರೇಖಾ ಡಂಬಳ,ಜೇವರ್ಗಿ ತಾಲೂಕ ಬೇಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶ್ವೇತಾ ಕಮತಗಿ,ಜೇವರ್ಗಿ ತಾಲೂಕಿನ ಮುರಗಾನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಲಕ್ಕಪ್ಪ ಬಿರಾದಾರ, ಸೇಡಂ ತಾಲೂಕಿನ ಗಜಲಾಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ದೇವಿಂದ್ರಪ್ಪ ಹಾಗೂ ಸೇಡಂ ತಾಲೂಕಿನ ಸೇಡಂ ವಾಸವದತ್ತಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪ್ರೇಮಿಳಾ.
ಪ್ರೌಢ ವಿಭಾಗ: ಆಳಂದ ತಾಲೂಕಿನ ಗೋಳಾ (ಬಿ) ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಶರಣಬಸಪ್ಪ ಬಿರಾದಾರ, ಅಫಜಲಪೂರ ತಾಲೂಕಿನ ಭೈರಾಮಾಡಗಿ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ವಾಣಿಶ್ರೀ ಕುಲಕರ್ಣಿ, ಕಲಬುರಗಿ ಉತ್ತರ ವಲಯ ಮಹಾಗಾಂವ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಪ್ರಭು ನಾಯಕ, ಕಲಬುರಗಿ ಉತ್ತರ ವಲಯ ಆದರ್ಶ ನಗರ ಕೆ ಸಿ ಡಿ ಇ ಡಿ ಟಿ ಬಾಲಕಿಯರ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಸಿದ್ದಪ್ಪ ತಂದೆ ಶರಣಪ್ಪ, ಕಲಬುರಗಿ ದಕ್ಷಿಣ ವಲಯದ ಫರಹತಾಬಾದ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಸಂತೋಷಕುಮಾರ ಹೂಗಾರ, ಕಲಬುರಗಿ ದಕ್ಷಿಣ ವಲಯದ ಹಡಗಿಲ ಹಾರೂತಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕಿ ಶ್ರೀದೇವಿ ಕಟ್ಟಿಮನಿ, ಜೇವರ್ಗಿ ತಾಲೂಕಿನ ಕೂಡಿ ದರ್ಗಾ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಡಾ|| ಇಂದುಮತಿ ರಾಠೋಡ್ ಹಾಗೂ ಸೇಡಂ ತಾಲೂಕಿನ ಜಾಕನಪಲ್ಲಿ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಜಗನ್ನಾಥ ಯಾಕಾಪೂರ.