ಸೆ. 5ಕ್ಕೆ ಶಿಕ್ಷಕರ ದಿನಾಚರಣೆ ಸರಳವಾಗಿ ಆಚರಿಸಲು ತೀರ್ಮಾನ

ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.03: ಇದೇ ಸೆಪ್ಟೆಂಬರ್ 5 ರಂದು ಈ ವರ್ಷದ ಶಿಕ್ಷಕರ ದಿನಾಚರಣೆ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯವನ್ನು ಸರಕಾರದ ಕೋವಿಡ್ ನಿಯಮಾವಳಿಯಂತೆ ಸರಳವಾಗಿ ಆಚರಿಸುಲು ಸಮಿತಿಯ ಅಧ್ಯಕ್ಷರಾದ ತಾಲ್ಲೂಕು ಪಂಚಾಯತ ಇ.ಒ ತಿಮ್ಮಣ್ಣ ಹುಲ್ಲುಮನಿ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಗುರುವಾರ ಪಟ್ಟಣ್ಣದ ಎಲ್.ಬಿ ಶಾಸ್ತ್ರಿ ಬಡಾವಣೆಯ ತಾಲ್ಲೂಕು ಪಂಚಾಯತಿ ಕಾರ್ಯಾಲಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸರ್ಕಾರಿ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ ಅವರು ಶಿಕ್ಷಕರ ದಿನಾಚರಣೆಯ ಕುರಿತು ಸರ್ಕಾರದ ಸರ್ಕಾರದ ಮಾರ್ಗಸೂಚಿಯಂತೆ 50 ಜನರ ಸೀಮಿತ ದೊಂದಿಗೆ ಯಾವುದೇ ನೆನಪಿನ ಕಾಣಿಕೆ ಹಾರ ತುರಾಯಿ ಇಲ್ಲದೆ ಪುಸ್ತಕಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ಸದಸ್ಯರಿಂದ ಅಭಿಪ್ರಾಯ ಪಡೆದು ಸಭೆಗೆ ತಿಳಿಸಿದರು.
ಶಿಕ್ಷಣ ಇಲಾಖೆಯ ಇಸಿಓ ಅಜ್ಜಪ್ಪ ಮಾತನಾಡಿ ಈ ಶಿಕ್ಷಕರ ದಿನಾಚರಣೆಯನ್ನು ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಮಹಾಮಾರಿ ಕೊರೋನಾ ಮೂರನೇ ಅಲೆಯನ್ನು ತಡೆಗಟ್ಟಲು ಸಾಮಾಜಿಕ ಅಂತರ, ಮುಖಗವಸು, ಸ್ಯಾನಿಟೈಜರ್ ಒಳಗೊಂಡು ಸೆಪ್ಟಂಬರ್ 5ರಂದು 10:00 ಗಂಟೆಗೆ ಸರಳವಾಗಿ ಆಚರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೇಶ್ ಸಿ.ಆರ್.ಪಿ ಮಂಜುನಾಥ,   ಶಿಕ್ಷಕರಾದ ಈಶ್ವರಪ್ಪ ತುರಕಾಣಿ, ಸಿದ್ದಪ್ಪ, ಮರಳನಗೌಡ, ಮುತ್ತೇಶ್, ಹನುಮಂತಪ್ಪ ಮುಂತಾದವರು ಸಭೆಯಲ್ಲಿ ಹಾಜರಿದ್ದರು.