ಸೆ.30 ರಿಂದ ಅ.16 ರವರೆಗೆ ಶೌರ್ಯ ಜಾಗರಣ ರಥಯಾತ್ರೆ

ಮುದ್ದೇಬಿಹಾಳ: ಸೆ.28:ವಿಶ್ವಹಿಂದೂ ಪರಿಷದ್60 ನೇ ವರ್ಷಕ್ಕೆ ಪಾದಾರ್ಪಣೆಮಾಡುತ್ತಿರುವ ಹಿನ್ನೆಲೆರಾಷ್ಟ್ರದಾದ್ಯಂತ ಸ30 ರಿಂದ ಅ16 ರವರೆಗೆ ಶೌರ್ಯಜಾಗರಣರಥಯಾತ್ರೆಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬ ಹಿಂದುವೂ ಕೈಜೋಡಿಸಿ ತನು ಮನದಿಂದ ಭಾಗವಹಿಸುವಂತೆ ಪರಿಷದ್ ನ ಬೆಳಗಾವಿ ಮಠ ಮಂದಿರಗಳ ಪ್ರಮುಖರಾದ ಶ್ರೀಮಂತ ದುದ್ದಗಿ ವಿನಂತಿಸಿದರು.
ಪಟ್ಟಣದ ಬಜಾರ ನಲ್ಲಿರುವ ಹನುಮಾನ್‍ದೇವಸ್ಥಾನದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ರಾಷ್ಟ್ರದ ಮೇಲೆ ಪರಕೀಯರ ಆಕ್ರಮಗಣಗಳು ನಡೆಯುತ್ತಲೇಇದ್ದರೂಅದನ್ನು ದಿಟ್ಟವಾಗಿ, ಸಮರ್ಪಕವಾಗಿಎದುರಿಸುತ್ತಾನ ನಮ್ಮ ಸನಾತನಧರ್ಮವನ್ನು ಈ ಪವಿತ್ರ ಭರತ ಭೂಮಿಯನ್ನು ಸಂರಕ್ಷಿಸುವಲ್ಲಿ ಸಾವಿರಾರು ಪರಾಕ್ರಮಿಗಳು ತಮ್ಮಜೀವನವನ್ನೇ ಸಮರ್ಪಿಸಿ, ಅವಶ್ಯ ಬಂದಾಗ ಬಲಿದಾನವೂ ಆಗಿ ನಮಗೆ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅವರತ್ಯಾಗ ಬಲಿದಾನಗಳ ಪರಿಣಾಮವಾಗಿ ನಮ್ಮ ಸನಾತನಧರ್ಮವು ಸುರಕ್ಷಿತವಾಗಿ ನಮ್ಮಕಾಲಖಂಡದವರೆಗೆತಲುಪಿದ್ದು, ಇದನ್ನು ಸಂರಕ್ಷಿಸುವ ಹೊಣೆ ಮತ್ತು ಮುಂದಿನ ಪೀಳಿಗೆಗೆ ಯಥಾವತ್ತಾಗಿ ತಲುಪಿಸಿ ನಿರಂತರಧರ್ಮರಕ್ಷಣೆಯನ್ನು ಮಾಡಬೇಕಾದಕಾರ್ಯವು ಪ್ರತಿಯೊಬ್ಬ ಹಿಂದುವಿನ ಮೇಲಿದೆಎಂದರು.
ಈ ವೇಳೆ ಬೆಳಗಾವಿ ವಿಬಾಗದ ಶಿವಾನಂದ ನಾಗರಾಳ ಮಾತನಾಡಿ, ರಥಯಾತ್ರೆ ಅ8 ರಂದು ಪಟ್ಟಣವನ್ನುತಲುಪಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಭಾಗವಹಿಸಬೇಕು ಎಂದು ವಿನಂತಿಸಿದರು.
ತಾಲೂಕುಅಧ್ಯಕ್ಷ ಶಿವಯೋಗಪ್ಪ ರಾಪೂರ, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕಮಾತನಾಡಿರಥಯಾತ್ರೆಕರ್ನಾಟಕಉತ್ತರ ಪ್ರಾಂತದಲ್ಲಿ ಏಲು ರಥಗಳಾಗಿ ಎಲ್ಲಜಿಲ್ಲೆ ಮತ್ತುತಾಲೂಕು ಕೇಂದ್ರಗಳ ಮೂಲಕ ಹಾದುಹೋಗುವಂತೆಆಯೋಜಿಸಲಾಗಿದ್ದು ಕಲಬುರ್ಗಿ, ಮಾನವಿ, ಶಿರಸಿ, ವಿಜಯಪುರ, ಬೆಳಗಾವಿ ಮತ್ತು ಹುಬ್ಬಳ್ಗಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ತಾಲೂಕುಉಪಾಧ್ಯಕ್ಷ ವಿಜಯಕುಮಾರ ನಾಯಕ, ಏಕನಾಥ್‍ಗೆದ್ದಲಮರಿ,ರಾಜುರಾಯಗುಂಡ, ಸಂಜು ಬಾಗೇವಾಡಿ, ಪುನೀತ್‍ತಿಪ್ಪರಗಿ, ಸಂತೋಷ್‍ದಡ್ಡಿ, ಸಂಗಮೇಶ್ ಹತ್ತಿ, ಗುರುಸ್ವಾಮಿತಂಗಡಗಿ, ಗಿರಣಿಗೌಡಪ್ಪ, ಶರಣು ಸಜ್ಜನ, ವಿರೇಶ ಢವಳಗಿ, ಅಶೋಕ ರಾಠೋಡ, ಸಾಯಿನಾಥಕುಂಬಾರ, ಜಗದೀಶ ಪಂಪಣ್ಣವರ ಸೇರಿದಂತೆ ಮತ್ತೀತರರುಇದ್ದರು.