ಸೆ.3 ರಂದು ಮಿಸ್ಟರ್ ಉತ್ತರ ಕರ್ನಾಟಕ – 2023

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ22: ಬ್ಲೂ ಸ್ಟಾರ್ ಕ್ರಿಯೇಶನ್ ಕ್ಲಬ್ ಹಾಗೂ ಧಾರವಾಡ ಜಿಲ್ಲಾ ಬಾಡಿ ಬಿಲ್ಡಿಂಗ್ ಮತ್ತು ಫಿಟ್ ನೆಸ್ ಫೆಡರೇಶನ್ ಸಂಯುಕ್ತ ಆಶ್ರಯದಲ್ಲಿ ಸೆ.3 ರಂದು ಇಲ್ಲಿನ ಅಶೋಕ ನಗರದ ಕನ್ನಡ ಭವನದಲ್ಲಿ ಮಿಸ್ಟರ್ ಉತ್ತರ ಕರ್ನಾಟಕ -2023 ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಶರೀಫ್ ಮುಲ್ಲಾ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯಕರ ಮತ್ತು ಫಿಟ್ ಜೀವನ ಶೈಲಿಯ ಸಮುದಾಯವನ್ನು ಪ್ರೇರೇಪಿಸಲು ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜಯನಗರ, ಬಳ್ಳಾರಿ, ಬೀದರ, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟ, ಬೆಳಗಾವಿ, ರಾಯಚೂರು, ಧಾರವಾಡ, ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಧಾರವಾಡ ಜಿಲ್ಲಾ ಬಾಡಿ ಬಿಲ್ಡಿಂಗ್ ಆ್ಯಂಡ್ ಫಿಟ್ ನೆಸ್ ಫೆಡರೇಶನ್ ಕೆಂಪೇಗೌಡ ಬಾಡಿ ಬಿಲ್ಡಿಂಗ್ ಫೆಡರೇಶನ್ (ಐಬಿಬಿಎಫ್‍ಎಫ್), ಭಾರತೀಯ ದೇಹದಾರ್ಢ್ಯ ಒಕ್ಕೂಟದೊಂದಿಗೆ ಸಂಯೋಜಿತವಾಗಿದ್ದು, ಈ ಸ್ಪರ್ಧೆಯಲ್ಲಿ ವಿಜೇತರು ಮಿಸ್ಟರ್ ಇಂಡಿಯಾಗೆ ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸಿರಾಜ ರಬಕವಿ, ಉಪಾಧ್ಯಕ್ಷ ಗುರುಸಂಗಪ್ಪ ಹುರಕಡ್ಲಿ, ಅಲ್ಲಾಭಕ್ಷ ಚೌದರಿ, ಕಾರ್ಯದರ್ಶಿ ಲೂಕ ಗುಂಡಮಿ, ಸಹಕಾರ್ಯದರ್ಶಿ ಶ್ರೀನಿವಾಸ ವದ್ದಿ, ರಮೇಶ ಶೆಟ್ಟಿ, ಮಾನಿಕಲಾಲ್, ಅಶೋಕ ನವಲಗುಂದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.