ಸೆ 3 ರಂದು ಕಲ್ಯಾಣ ಕರ್ನಾಟಕದ ಸಮಸ್ಯೆ ಸವಾಲುಗಳ ಕುರಿತು ಹೋರಾಟ ಸಮಿತಿಯಿಂದ ದುಂಡು ಮೇಜಿನ ಸಭೆ

ಕಲಬುರಗಿ:ಸೆ.02:ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಸರ್ವಾಂಗೀಣ ಅಭಿವೃದ್ಧಿಯ ವಿಷಯಕ್ಕೆ ಸಂಬಂಧಿಸಿ ಪ್ರಸ್ತುತ ಇರುವ ಸಮಸ್ಯೆ ಮತ್ತು ಸವಾಲುಗಳು ‌ಹಾಗೂ ಪರಿಹಾರಗಳಿಗೆ ಚರ್ಚಿಸಿ ನಿರ್ಣಯ ಕೈಗೊಂಡು ಸರ್ಕಾರದ ಮೇಲೆ ಸಕಾರಾತ್ಮಕ ಒತ್ತಡ ತರಲು ದಿನಾಂಕ 3.9.23 ರಂದು ರವಿವಾರ ಬೆಳಿಗ್ಗೆ 11.15 ಗಂಟೆಗೆ ಹಿಂದಿ ಪ್ರಚಾರ ಸಭಾದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕ್ರಿಯಾ ಸದಸ್ಯರ,ಚಿಂತಕರ ದುಂಡು ಮೇಜಿನ ಸಭೆ ನಿಯೋಜಿಸಲಾಗಿದೆ.
ಈ ಮಹತ್ವದ ಸಭೆಗೆ ಸಮಿತಿಯ ಕ್ರಿಯಾ ಸದಸ್ಯರು ಮತ್ತು ಅಭಿವೃದ್ಧಿ ಪರ ಚಿಂತಕರು ಸರಿಯಾದ ಸಮಯಕ್ಕೆ ಹಾಜರಾಗಲು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.