ಸೆ.28ರಂದು ದಸರಾ ಕವಿಗೋಷ್ಠಿ

ಮೈಸೂರು,ಸೆ.23:- ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ದಸರಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಕಲಾಮಂದಿರದಲ್ಲಿ ನಡೆಯುವ ಕವಿಗೋಷ್ಠಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೆ.28ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ.
ಇಂದು ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ದಸರಾ ಕವಿಗೋಷ್ಠಿ ಭಿತ್ತಿಪತ್ರ ಬಿಡುಗಡೆಗೊಳಿಸಿದ ದಸರಾ ಕವಿಗೋಷ್ಠಿ ಉಪಸಮಿತಿಯ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮಾಹಿತಿ ನೀಡಿ ಮುಖ್ಯ ಅತಿಥಿಗಳಾಗಿ ಸಚಿವ ವಿ.ಸುನೀಲ್ ಕುಮಾರ್, ಕವಿಗಳಾದ ಡಾ.ದೊಡ್ಡ ರಂಗೇಗೌಡ, ವಾಗ್ಮಿ ಪೆÇ್ರ.ಎಂ.ಕೃಷ್ಣೇಗೌಡ ಭಾಗವಹಿಸಲಿದ್ದಾರೆ. 11.30ಕ್ಕೆ ಹಾಸ್ಯಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಬಿ.ಆರ್.ಲಕ್ಷ್ಮಣ್ ರಾವ್ ವಹಿಸಲಿದ್ದು, ದುಂಡೀರಾಜ್, ಭುವನೇಶ್ವರಿ ಹೆಗಡೆ, ಮೋಹನ್ ಕಳಸಾಪುರ, ಭಾಸ್ಕರ್ ಹೆಜ್ಜೆ ಸೇರಿದಂತೆ 20ಮಂದಿ ಸುಪ್ರಸಿದ್ಧ ಕವಿಗಳು ಭಾಗವಹಿಸುವರು. ಗಾಯಕ ನಿತಿನ್ ರಾಜಾರಾಂ ಶಾಸ್ತ್ರಿ ಹಾಸ್ಯ ಗೀತೆಗಳನ್ನು ಹಾಡುವರು ಎಂದರು.
ಮಧ್ಯಾಹ್ನ 2.30ಕ್ಕೆ ಜನಪದ ಕಾವ್ಯ ಸಂಭ್ರಮವಿದ್ದು ಪೆÇ್ರ.ಪಿ.ಕೆ.ರಾಜಶೇಖರ್ ಮತ್ತು ತಂಡದವರು ಹೊನ್ನಾರು ಜನಪದ ಗಾಯಕರು, ಡಾ.ಮಳ್ಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರು ನಡೆಸಿಕೊಡಲಿದ್ದಾರೆ.
ಸೆ.29ರಂದು ಕ್ಲಾಸಿಕ್ ಕನ್ವೆನ್ಶನ್ ಹಾಲ್ ನಲ್ಲಿ ಉರ್ದುಕವಿಗೋಷ್ಠಿಯಿದ್ದು ಸಂಜೆ 7ಗಂಟೆಗೆ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ತನ್ವೀರ್ ಸೇಠ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರುಗಳಾದ ಎಸ್.ಎ.ರಾಮದಾಸ್, ಡಾ.ಯತೀಂದ್ರ ಸಿದ್ದರಾಮಯ್ಯ ಬಾಘವಹಿಸಲಿದ್ದಾರೆ.
ಉರ್ದು ಕವಿಗೋಷ್ಠಿಯಲ್ಲಿ ಜೈಪುರದ ಲತಾಹಯ, ಕಡಪದ ಡಾ.ರಹಿಫಿದಾಯಿ, ದೆಹಲಿಯ ರಾಜು ರಿಯಾಜ್, ಹೈದ್ರಾಬಾದ್ ನ ಟಿಪಿಕಲ್ ಜಗಾಸಿಯಲ್, ಶಾಹಿದ್ ಆದಿಲ್, ಭೋಪಾಲ್ ನ ಶಬನಾ ಶಬನಂ, ತಮಿಳ್ನಾಡಿನ ರಹತ್ ಹರಾರತ್, ಮಹಾರಾಷ್ಟ್ರದ ಷಿರಾಜ್ ಶೋಲಾಪುರಿ ಭಾಗವಹಿಸಲಿದ್ದಾರೆ ಎಂದರು.
ಸೆ.30ರಂದು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ನಡೆಯಲಿದ್ದು, ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಖ್ಯಾತ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅಧ್ಯಕ್ಷತೆಯನ್ನು ವಹಿಸಲಿದ್ದು ಮುಖ್ಯ ಅತಿಥಿ ಗಳಾಗಿ ವಿಮರ್ಶಕಿ ಡಾ.ಮಂಗಳಾ ಪ್ರಿಯದರ್ಶಿನಿ ಪಾಲ್ಗೊಳ್ಳಲಿದ್ದು ಸುಮಾರು 40 ಮಂದಿ ಕವಿಗಳು ಭಾಗವಹಿಸಲಿದ್ದಾರೆ ಎಂದರು.
ಅ.1ರಂದು ಪ್ರಾದೇಶಿಕ ಕವಿಗೋಷ್ಠಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯಲಿದ್ದು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಲಿದ್ದು, ಖ್ಯಾತ ಕವಯತ್ರಿ ನೂತನ ದೋ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಯಲ್ಲಪ್ಪ ಕೆ.ಕೆ.ಪುರ ಭಾಗವಹಿಸಲಿದ್ದಾರೆ. ಸುಮಾರು 40ಮಂದಿ ಕವಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಚಿಗುರು ಕವಿಗೋಷ್ಠಿ ನಡೆಯಲಿದ್ದು ಶಾಸಕ ಎಲ್.ನಾಗೇಂದ್ರ ಉದ್ಘಾಟನೆ ನೆರವೇರಿಸಲಿದ್ದು , ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಅಧ್ಯಕ್ಷತೆವಹಿಸಲಿದ್ದಾರೆ. ಕವಿ ವಿಮರ್ಶಕ ಡಾ.ಸಿ.ಪಿ.ಸಿದ್ದಾಶ್ರಮ ಮುಖ್ಯ ಅಥಿಗಳಾಗಿ ಭಾಗವಹಿಸಲಿದ್ದು, 40ಮಂದಿ ಕವಿಗಳು ಭಾಗವಹಿಸುತ್ತಾರೆಂದು ತಿಳಿಸಿದರು.
ಅ.3ರಂದು ಮಾನಸಗಂಗೋತ್ರಿಯ ಸೆನೆಟ್ ಸಭಾಂಗಣದಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದ್ದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಉದ್ಘಾಟನೆ ನೆರವೇರಿಸಲಿದ್ದು, ಕವಿ ಹಾಗೂ ನಾಟಕಕಾರರಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರುಗಳಾದ ಎಸ್.ಟಿ.ಸೋಮಶೇಖರ್, ವಿ.ಸುನೀಲ್ ಕುಮಾರ್ ಭಾಗವಹಿಸಲಿದ್ದು 40ಮಂದಿ ಕವಿಗಳು ಪಾಲ್ಗೊಳ್ಳುವರು ಎಂದರು.