ಸೆ.27 ರ ಭಾರತ್ ಬಂದ್ ಗೆ ಕೂಡ್ಲಿಗಿಯಲ್ಲಿ ಬೆಂಬಲ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.23 :- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಮತ್ತು ಜನವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 27ರಂದು ಭಾರತ್ ಬಂದ್ ನೀಡಿರುವ ಕರೆಗೆ ಕೂಡ್ಲಿಗಿ ತಾಲೂಕಿನ ರೈತ ಸಂಘ, ಕಾರ್ಮಿಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಬಂದ್ ಯಶಸ್ವಿಗೊಳಿಸುವುದಾಗಿ ರೈತ ಸಂಘಟನೆ ತಿಳಿಸಿದೆ.  ತಾಲೂಕಿನ ವಿವಿದ ಸಂಘಟನೆಗಳ ಸಹಯೋಗದಲ್ಲಿ  ಬುಧವಾರ ಮಧ್ಯಾಹ್ನ ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೆ27ರಂದು ನಡೆಯುವ ಭಾರತ್ ಬಂದ್ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ವಿವಿದ ಸಂಘಟನೆಗಳಿಂದ ಕೂಡ್ಲಿಗಿಯಲ್ಲೂ ಭಾರತ್  ಬಂದ್ ಕರೆಗೆ ಹೆಚ್ಚಿನ ಬೆಂಬಲ  ನೀಡಿ ಬಂದ್ ಯಶಸ್ವಿಗೊಳಿಸುವ ಒಮ್ಮತ ತೀರ್ಮಾನಕ್ಕೆ ಮುಂದಾಗಿದ್ದಾರೆ
ರೈತ ಸಂಘದ ಜಿಲ್ಲಾ ಮುಖಂಡರಾದ  ದೇವರಮನೆ ಮಹೇಶ್ ಮಾತನಾಡಿ,ರೈತರ ಹಾಗೂ  ಜನ ವಿರೋಧಿ ನೀತಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಜರುಗುತ್ತಿರುವ ಪ್ರತಿಭಟನೆಗೆ.ಬೆಂಬಲ ವ್ಯಕ್ತಪಡಿಸಿ ಕರೆ ನೀಡಿರುವ ಭಾರತ ಬಂದ್ ಕರೆ ಹಿನ್ನೆಲೆಯಲ್ಲಿ,ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿದ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಕೂಡ್ಲಿಗಿ ಬಂದ್ ಗೆ.ಸಾರ್ವಜನಿಕರು ಸಹಕರಿಸಬೇಕು ಹಾಗೂ ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್ ಮಾಲೀಕರು,  ವಾಹನಗಳ ಕಾರ್ಮಿಕರು,ಬಂದ್ ನಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಮಹೇಶ  ಮನವಿ ಮಾಡಿದರು.   ಈ ಸಂದರ್ಭದಲ್ಲಿ ರೈತ ಸಂಘದ ಕಕ್ಕುಪ್ಪಿ ಎಂ. ಬಸವರಾಜ, ಕಾರ್ಮಿಕ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ.
ರೈತ ಸಂಘದ ಮುಖಂಡರಾದ ವಿ ನಾಗರಾಜ,ಎಸ್.ಭಾಷಾಸಾಬ್,  ಕಾಲ್ಚಟ್ಟಿ .ಕೃಷ್ಣ,ಬಿ.ಚನ್ನಬಸಪ್ಪ ಶೇಷಪ್ಪ, ಸೋಮಣ್ಣ ಹಾಗೂ ಹಾಲಸ್ವಾಮಿ ಮತ್ತು ಕಾರ್ಮಿಕ ಮುಖಂಡ ಗುನ್ನಳ್ಳಿರಾಘವೇಂದ್ರ, ದೇವದಾಸಿ ವಿಮೋಚನ ಸಂಘದ ಅಧ್ಯಕ್ಷೆ  ಕೆ.ವೆಂಕಮ್ಮ  ಪೂರ್ವಭಾವಿ      ಸಭೆಯಲ್ಲಿ ಭಾಗವಹಿಸಿದ್ದರು.