ಸೆ. 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಕಲಬುರಗಿ:ಸೆ.21: ಸೆ. 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ 2023 ಅನ್ನು ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಸಂದೇಶದಡಿಯಲ್ಲಿ ಕ್ಷೇತ್ರದಲ್ಲಿ ತೊಡಗಿರುವ ಭಾಗಿದಾರರ ಸಹಭಾಗಿತ್ವದಲ್ಲಿ ಸ್ಥಳೀಯ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ಸಹಯೊಗದೊಂದಿಗೆ ರಸಪ್ರಶ್ನೆ, ಪ್ರಬಂಧ ಚರ್ಚಾ ಸ್ಪರ್ದೆ, ರಂಗೋಲಿ ಸ್ಪರ್ದೆ ಇತ್ಯಾದಿ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಳಂದ ಲಾಡ್ಲೇ ಮಶಾಕ ದರ್ಗಾ, ಅಫಜಲಪೂರ, ರಾಣಿ ಮಹಲ, ಜೇವರ್ಗಿ, ಪಣ್ಮಖ ಶಿವಯೋಗಿ ಮಠ, ಯಡ್ರಾಮಿ ರಾಮತೀರ್ಥ ಪುಪ್ಕರಣೆ, ಕಮಲಾಪೂರ, ಹೊಳಕುಂದಾ ಪ್ರಾಚೀನ ಸ್ಮಾರಕಗಳು, ಚಿಂಚೋಳಿ ಚಂದ್ರಂಪಳ್ಳಿ/ಚಿಂಚೋಳಿ ವನ್ಯ ಜೀವಿಧಾಮ, ಚಿತ್ತಾಪೂರ, ನಾಗಾವಿ ಪ್ರಾಚೀನ ಅವಶೇಷಗಳು, ಸೇಡಂ ಪಂಚಲಿಂಗೇಶ್ವರ ದೇವಸ್ಥಾನ ಮುಂತಾದವುಗಳು.