ಸೆ. 25ರಂದು ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಂಗೀತ ನುಡಿನಮನ

ಕಲಬುರಗಿ:ಸೆ.21: ನಗರದ ಕನ್ನಡ ಭವನದಲ್ಲಿ ಸೆಪ್ಟೆಂಬರ್ 25ರಂದು ಸಂಜೆ 5 ಗಂಟೆಗೆ ಕಲಾಕಾರ ಸ್ಟುಡಿಯೋ ಕಲಾವಿದರಿಂದ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಶೃದ್ಧಾಂಜಲಿ ಕಾರ್ಯಕ್ರಮದ ಜೊತೆ, ಜೊತೆಯಲ್ಲಿ ಸಂಗೀತದ ನುಡಿನಮನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಲ್ಮೀಕಿ ಕಾಂಬಳೆ ಅವರು ತಿಳಿಸಿದ್ದಾರೆ.
ಕಲಾವಿದರಾದ ವಾಲ್ಮೀಕಿ ಕಾಂಬಳೆ, ಚಾಂದ್ ಜಾಕ್ಸನ್, ವಿಠಲ್ ಮೇತ್ರೆ, ರಾಜು ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಹಣಮಂತ್ ಕಟ್ಟಿ, ಜಮೀರ್ ಅಹ್ಮದ್, ರಾಜೇಶ್ ರಾಂಪುರೆ, ಮಹಾಲಿಂಗ್ ಸುಂಕದ್, ಉದಯಕುಮಾರ್, ಪಾರ್ವತಿ ಉರ್ಕಿಮಠ್, ಶೈಲಾಜಿ ಬಿ., ಅವರು ಪಾಲ್ಗೊಳ್ಳುವರು. ಕುಟುಂಬದೊಂದಿಗೆ ಬನ್ನಿ, ಕನ್ನಡ ಮತ್ತು ಹಿಂದಿ ಹಾಡುಗಳನ್ನು ಆನಂದಿಸಿ ಎಂದು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.