ಸೆ.24 ರಂದು ಆದರ್ಶ ಉಪಾಧ್ಯಾಯರ ಪ್ರಶಸ್ತಿ ಸಮಾರಂಭ

ಕಲಬುರಗಿ, ಅ. 30: ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ಬರುವ ಸೆ.24 ರಂದು ಜಿಲ್ಲಾ ಮಟ್ಟದ ಆದರ್ಶ ಉಪಾಧ್ಯಾಯರ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಗುರುಪಾದ ಕೋಗನೂರ ಹೇಳಿದರು.
ನಗರದ ಶ್ರೀ ರವಿಶಂಕರ ಗುರೂಜಿ ಸಭಾ ಭವನದಲ್ಲಿ ಏರ್ಪಡಿಸಿದ ಸ್ಕೂಪ್ಸ್ ರಾಜ್ಯ ಘಟಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ ಕೆಜಿ ಯಿಂದ ಪಿಜಿ ವರೆಗೆ ಕಾರ್ಯ ನಿರ್ವಹಿಸುತ್ತಿರುವ ಉಪಾಧ್ಯಾಯರು, ಚಾಲಕರು, ಪೊಲೀಸರು ಒಳಗೊಂಡಂತೆ ಒಟ್ಟು 101 ಜನ ಸಾಧಕರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದರು. ಕಲೆ ಸಹಿತ್ಯ, ಪತ್ರಿಕೋದ್ಯಮ ಸೇರಿ ವಿವಿಧ ಇಲಾಖೆಯ ಸಾಧಕರನ್ನು ಇದೇ ಪ್ರಮ ಬಾರಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಸ್ಕೂಪ್ಸ್ ಪದಧಿಕಾರಿಗಳ ಆಯ್ಕೆ ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು.
ನಿವೃತ್ತ ಶಿಕ್ಷಕಿ ಶಾರದಾಮಣಿ ಪಾಟೀಲ ಮಹಾಸಭೆ ಉದ್ಘಾಟಿಸಿದರು.
ಸ್ಕೂಪ್ಸ್ ಜಿಲ್ಲಾಧ್ಯಕ್ಷೆ ಸಾವಿತ್ರಿ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಅಂಥವರನು ಕೂಡ ಸತ್ಕರಿಸಲಾಗುತ್ತದೆ. ಜೊತೆಗೆ ಶಿಕ್ಷಕ ವೃತ್ತಿಯನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಒದೆಡೆ ಸೇರಿ ಬೃಹತ್ ಮಟ್ಟದ ಕಾರ್ಯಕ್ರಮ ಕಲಬುರಗಿಯ ಬ್ರಹ್ಮಕುಮಾರಿ ಓಂ ಶಾಂತಿ ಧಾಮದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಮದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಧರ್ಮಣ್ಣ ಧನ್ನಿ, ಸೇವಂತಾ ಚವ್ಹಾಣ, ಭಾಗ್ಯಲತಾ ಶಾಸ್ತ್ರಿ, ಜಾಕೀರ ಹುಸೇನ ಕುಪನೂರ, ಬಾಬುರಾವ ಕುಲಕರ್ಣಿ, ವೆಂಕಟರೆಡ್ಡಿ ಕರೆಡ್ಡಿ, ವಿಜಯಕುಮಾರ ಜಿಡಗಿ, ಓಂ ಓಂತಿ ಸಾತ್ವಿ ಗೀತಾ, ಪದ್ಮಾ ರಾವೂತ, ಸುರೇಖಾ ಜ್ಯೋಶಿ, ಅನ್ನಪೂರ್ಣ ಪಾಟೀಲ, ನಂದಿನಿ ಸನಬಾಲ, ಉಪಸ್ಥಿತರಿದ್ದರು
ಲಕ್ಮಣ ಝಳಕಿ ನಿರೂಪಿಸಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸಲಾಯಿತು. ಎನ್ ರೇಣುಕಾ ಸ್ವಾಗತಿಸಿದರು. ಅಗ್ನಿಹೋತ್ರಿ ಪ್ರಾರ್ಥನೆ ಗೀತೆ ಹಾಡಿದರು.