ಸೆ.23 ರಂದು ಚಾ.ನಗರದಲ್ಲಿ ರೈತರೊಂದಿಗೆ ರಾಜುಬಾಯೀಜೀ ಸಂವಾದ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.21- ಸೆಪ್ಟಂಬರ್ 23 ರಂದು ಬೆಳಗ್ಗೆ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಗಳ ಮುಖ್ಯಾಲಯ ಮೌಂಟ್ ಅಬು ರಾಜಸ್ಥಾನದ ರಾಜಯೋಗಿ ಬಿಕೆ ರಾಜುಬಾಯಿ ಜೀಯವರು ರೈತರೊಂದಿಗೆ ಸಂವಾದ ಮಾಡಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜುಬಾಯಿ ಜೀಯವರು ಈಶ್ವರೀಯ ವಿವಿಯಲ್ಲಿ 50 ವರ್ಷದಿಂದ ಸಮರ್ಪಿತರಾಗಿ ಮುರಳಿ ವಿಭಾಗದಲ್ಲಿ ಇಡೀ ಜಗತ್ತಿಗೆ ಭಗವಂತನ ಮಹಾವಾಖ್ಯಗಳನ್ನು ಕಳಿಸುವ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ ಸೇವಾ ವಿಭಾಗದಲ್ಲಿ ರಾμÁ್ಟ್ರಧ್ಯಕ್ಷರಾಗಿ ಯೋಗಿಕ ಕೃಷಿಯ ಬೇಸಾಯ ಪದ್ಧತಿಯಲ್ಲಿ ಸಂಶೋದಕರಾಗಿದ್ದಾರೆ ಎಂದು ದಾನೇಶ್ವರಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ಮೌಂಟ್ ಅಬು ರಾಜಾಸ್ಥಾನದಿಂದ ನಗರದ ಪ್ರಕಾಶ ಭವನಕ್ಕೆ ಭೇಟಿ ನೀಡಿ, ಬೆಳಗ್ಗೆ 10 ಗಂಟೆಗೆ ಜಿಲ್ಲಾ ರಾಜಯೋಗ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭೋದನೆ ಮಾಡಲಿದ್ದಾರೆ. 12 ಗಂಟೆಗೆ ಯೋಗಿಕ ಬೇಸಾಯ ಪದ್ಧತಿ ಕುರಿತು ರೈತರೊಂದಿಗೆ ಸಂವಾದ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂವಾದಕ್ಕೆ ಭಾಗವಹಿಸುವ ರೈತರು ಮೊದಲೇ ಹೆಸರನ್ನು ನೊಂದಾಯಿಸಕೊಳ್ಳಬೇಕು. ಮೊದಲು ಬರುವ 50 ಜನರಿಗೆ ಪ್ರವೇಶ ಅವಕಾಶ ವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 7483520495 ಇಲ್ಲವೆ 7899820430ನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.