ಸೆ.23 ರಂದು ಉಚಿತ ಹೃದಯ, ನರರೋಗ, ಮೂತ್ರಪಿಂಡದ ಹಾಗೂ ಕ್ಯಾನ್ಸರ್ ತಪಾಸಣೆ ಶಿಬಿರ

ಯಾದಗಿರಿ : ಸೆ.21:ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಸಿದ್ದಿವಿನಾಯಕ ಮಲ್ಟಿಸ್ಪಷಾಲಿಟಿ ಆಸ್ಪತ್ರೆ ಯಾದಗಿರಿ ಸಹಯೋಗದಲ್ಲಿ ಹೃದಯ ರೋಗ, ನರರೋಗ, ಮೂತ್ರಪಿಂಡ ಹಾಗೂ ಕ್ಯಾನ್ಸರ್ ರೋಗಗಳ ಉಚಿತ ತಪಾಸಣಾ ಶಿಬಿರ ನಗರದ ಸಿದ್ದಿವಿನಾಯಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಟ್ಯಾಂಕ್ ಬಂಡ್ ಹತ್ತಿರ, ಸಬಾ ಸ್ಕೂಲ್ ಪಕ್ಕದಲ್ಲಿ, ಮೇನ್ ರೋಡ್ ಯಾದಗಿರಿ.

ಬೆಳಗ್ಗೆ 10 ರಿಂದ ಮದ್ಯಾಹ್ನ 3 ಗಂಟೆಯ ವರೆಗೆ ಏರ್ಪಡಿಸಲಾಗಿದೆ ಎಂದು ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕರಾದ ರಾಜೇಶಗೌಡರವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಶಿಬಿರದಲ್ಲಿ ಬೆಂಗಳೂರಿನ ಖ್ಯಾತ ವೈದ್ಯರು ತಪಾಸಣೆ ನಡೆಸಲಿದ್ದು ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಶಿಬಿರದಲ್ಲಿ ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಬಿಪಿ., ಇಸಿ, 2ಡಿ ಎಕೋ ಸ್ಕ್ಯಾನಿಂಗ್ ಗಳನ್ನು ಸಹ ಮಾಡಲಾಗುವುದು ಎಂದು ತಿಳಿಸಿದರು.

ಹೃದಯ, ನರ, ಕಿಡ್ನಿ ಕಲ್ಲುಗಳ ಸಮಸ್ಯೆಗೆ ಬಿಪಿಎಲ್ ಹಸಿರು, ಅಂತ್ಯೋದಯ ರೇಷನ್ ಕಾರ್ಡುದಾರರಿಗೆ ಉಚಿತವಾಗಿ ಹೆಚ್ಚಿನ -ಶಸ್ತ್ರ ಚಿಕಿತ್ಸೆ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.