ಸೆ. 18 ರಂದೆ ವಿಮೋಚನಾ ದಿನ ಆಚರಿಸಲು ಆಗ್ರಹ: ಅನಂತ ಗುಡಿ

ಕಲಬುರಗಿ:ಸೆ.12:”ಕಲ್ಯಾಣ ಕರ್ನಾಟಕ ಉತ್ಸವ” ವನ್ನು ಸೆಪ್ಟೆಂಬರ್ “18” ರಂದು ಆಚರಿಸಲು ಕರ್ನಾಟಕ ಯುವಜನ ಒಕ್ಕೂಟ(ರಿ), ಕಲಬುರಗಿ ಹಾಗೂ “ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿ” (ರಿ), ಕಲಬುರಗಿಯ ಸಂಯುಕ್ತವಾಗಿ ಜಂಟಿಯಾಗಿ ಆಗ್ರಹಿಸಿದೆ
ಈ ಹಿಂದೆ ಜೆ. ಮಾದುಸ್ವಾಮಿ ಯವರು ಕಾನೂನು ಮಂತ್ರಿಗಳಾಗಿ, ಮೊದಲ ಬಾರಿ ಕಲಬುರಗಿ ನಗರಕ್ಕೆ ಆಗಮಿಸಿದ ಸಂದರ್ಭ, ಕಲಬುರಗಿಗೆ ಏಂಖಿ ಪೀಠ ಉದ್ಘಾಟಿಸಲು ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡಿಕೊಂಡು ಮೂರು ವರ್ಷಗಳಾದರು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು 1998 ರಲ್ಲಿ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತಪ್ಪು ನಿರ್ಣಯ ವನ್ನು ನೈಜ ಸಂಗತಿಗಳನ್ನು ಪರಿಗಣಿಸಿ, ಸತ್ಯಾಸತ್ಯತೆಯನ್ನು ಕಾನೂನಾತ್ಮಕವಾಗಿ ಸರಿಪಡಿಸಿ, ತಿದ್ದುಪಡಿಗೊಳಿಸಿ, ಈ ಭಾಗದ ತಪ್ಪು ಆಚರಣೆಯ ದಿನವನ್ನು ಮರು ನಿಗದಿಗೊಳಿಸಿ ಆಚರಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರ ವಿಫಲವಾಗಿದೆ, ನಮ್ಮ ಮನವಿಗೆ ಉತ್ತರವನ್ನು ನೀಡದೆ, ಈ ಭಾಗಕ್ಕೆ ಅನ್ಯಾಯ ಎಸಗಿದ್ದಾರೆ ಅಲ್ಲದೆ ನಮ್ಮ ಮನವಿಗೆ ಉತ್ತರ ತಿಳಿಸದೆ ನಮ್ಮ ಭಾವನೆಗಳಿಗೆ ಅಪಮಾನ ಗೊಳಿಸಿದ್ದಾರೆ ಎಂದು ಈ ಭಾಗದ ಕಲ್ಯಾಣ ಕರ್ನಾಟಕ ಯುವಜನ ಒಕ್ಕೂಟದ ರಾಜ್ಯ ಸಂಚಾಲಕರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಕ.ಕ.ಪ್ರತ್ಯೇಕ ರಾಜ್ಯ ಜಾಗ್ರತಿ ಹೋರಾಟ ಸಮಿತಿಯ, ನ್ಯಾಯವಾದಿ ಜೇನ ವೆರಿ ವಿನೋದ ಕುಮಾರ, ಕ.ಕ.ದ ವಿಭಾಗೀಯ ಸಂಚಾಲಕ, ಉದಯಕುಮಾರ್ ಜೇವರ್ಗಿ, ಕಾರ್ಯಾಧ್ಯಕ್ಷ ಶ್ರೀ ಭೀಮರಾವ ಜಿರಗಿ, ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅನಂತ. ಜಿ. ಗುಡಿ ಹಾಗೂ ಸದಸ್ಯರು ಮತ್ತು ಇತರರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.