ಸೆ. 18 ಜೆಡಿಎಸ್ ಸಮಾವೇಶ-ಯಶಸ್ವಿಗೆ ಕರೆ

ಕೋಲಾರ: ಸೆ,೯- ಕಾರಣದಿಂದಾಗಿ ಎರಡು ಬಾರಿ ಮುಂದೂಡಲಾಗಿದ್ದ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮಾವೇಶವನ್ನು ನಗರದ ಜೂನಿಯರ್‌ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ ೧೮ರಂದು ಆಯೋಜಿಸಲಾಗಿದ್ದು ಸಮಾವೇಶದ ಯಶಸ್ವಿಗೆ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಮನವಿ ಮಾಡಿದರು
ನಗರದ ಜೆಡಿಎಸ್ ಕಛೇರಿಯಲ್ಲಿ ಬುಧವಾರ ಸಮಾವೇಶದ ಯಶಸ್ಸಿಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ ಇಬ್ರಾಹಿಂ, ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದು ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ನಡೆಸಬೇಕಾಗಿದೆ ಪ್ರತಿ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ವಾರ್ಡ್‌ಗಳಲ್ಲಿ ಜೆಡಿಎಸ್ ಪಕ್ಷದ ಅಧಿಕಾರ ಅವಧಿಯಲ್ಲಿನ ಯೋಜನೆಗಳನ್ನು ಜನತೆಗೆ ತಿಳಿಸಿ ಕೊಟ್ಟು ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಬೇಕಾಗಿದೆ ಎಂದರು
ಜೆಡಿಎಸ್ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಇತಿಹಾಸವಿದೆ ಅಲ್ಪಸಂಖ್ಯಾತ ಸಮುದಾಯಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ಓಟು ಬ್ಯಾಂಕ್ ಸೀಮಿತಗೊಳಿಸಿದ್ದು ಅಲ್ಪಸಂಖ್ಯಾತ ಅಭಿವೃದ್ಧಿ ಜೆಡಿಎಸ್ ಪಕ್ಷದಿಂದ ಸಾಧ್ಯ ಎಂದು ಇಬ್ರಾಹಿಂ ಹಾದಿಯಾಗಿ ಎಲ್ಲರೂ ಪಕ್ಷಕ್ಕೆ ಬರತ್ತಾ ಇದ್ದು ನಮ್ಮದೇ ಪಕ್ಷದಲ್ಲಿ ಹಿಂದೆ ಕೇಂದ್ರ ಸಚಿವರಾಗಿ,ರಾಜ್ಯದಲ್ಲೂ ಅನೇಕ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಅವರು ಮರಳಿ ಜೆಡಿಎಸ್ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಶಕ್ತಿ ಬಂದಂತಾಗಿದೆ ಈಗಿರುವ ಅವಕಾಶವನ್ನು ಬಳಸಿಕೊಂಡು ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರ ನಾಗರಾಜ್ ಜೆಡಿಎಸ್ ಸೇರ್ಪಡೆಯಾದರು ಮುಖಂಡರಾದ ಸಮೃದ್ಧಿ ಮಂಜುನಾಥ್, ಸಿಎಂಆರ್ ಶ್ರೀನಾಥ್, ಮಲ್ಲೇಶ್ ಬಾಬು, ಬಣಕನಹಳ್ಳಿ ನಟರಾಜ್, ಚಂದ್ರಶೇಖರಗೌಡ,ಅಲ್ಪಸಂಖ್ಯಾತ ಮುಖಂಡರಾದ ಸುಹೇಲ್ ದಿಲ್ ನವಾಜ್, ಯಾರಭ್, ಜಮೀರ್ ಆಹಮದ್, ಮುಸ್ತಫಾ, ಅಂಜುಮಾನ್ ಸಂಸ್ಥೆ ಜಮೀರ್ ಪಾಷ, ನಾರಾಯಣಸ್ವಾಮಿ, ಕೆಜಿಎಫ್ ದಯಾನಂದ್ ಜನಪನಹಳ್ಳಿ ಆನಂದ್, ವಡಗೂರು ರಾಕೇಶ್, ರಾಮು, ಮುಂತಾದವರು ಇದ್ದರು