ಸೆ. 18ರಂದೇ ನೈಜ ವಿಮೋಚನಾ ದಿನ: ಸುರಪುರದಲ್ಲಿ ರಾಷ್ಟ್ರದಲ್ಲಿ ಮೊಟ್ಟ ಮೊದಲ ಸರ್ದಾರ್ ವಲ್ಲಭಬಾಯಿ ಪಟೇಲ್‍ರ ಮೂರ್ತಿ ಸ್ಥಾಪನೆ

ಕಲಬುರಗಿ,ಸೆ.18:ಇಡೀ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ ಪಟೇಲ್ ಅವರ ಮೂರ್ತಿಯನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಕøತ ಸಾಹಿತ್ಯ ಪಂಡಿತ ರಂಗಂಪೇಟೆಯ ಜಗನ್ನಾಥ್ ಪಾಣಿಭಾತೆ ಅವರು ಹೇಳಿದರು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಮೂರ್ತಿ ಎದುರುಗಡೆ ಭಾನುವಾರ ಕರ್ನಾಟಕ ಯುವ ಜನ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ವಿಮೋಚನಾ ದಿನಾಚರಣೆ ಹಾಗೂ 74ನೇ ಮರು ಸ್ವಾತಂತ್ರ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, 550 ಸಂಸ್ಥಾನಗಳ ವಿಲೀನಗೊಳಿಸಿದ ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ದಿಟ್ಟ ನಿರ್ಧಾರವೇ ಇಂದು ನಾವು ಸ್ವಾತಂತ್ರ್ಯವಾಗಿ ಮಾತನಾಡುವ ಶಕ್ತಿ ನೀಡಿದ ಕ್ರಾಂತಿ ಮೂರ್ತಿ ಎಂದರು.
ನನ್ನ ತಂದೆ ಪ್ರಧಾನಪ್ಪ ಪಾಣಿಭಾತೆ ಅವರು ಮುಖ್ಯ ಸಂಚಾಲಕ ನಮ್ಮೂರಿನ ಮಾರವಾಡಿ ಸೇಠ್, ಶಿವನಾರಾಯಣ್ ವರ್ಮಾ ಅವರ ಕೃಪೆಯಿಂದ ಗುಜರಾತಿನಿಂದ ಮೂರ್ತಿ ತಂದು ಸುರಪುರದಲ್ಲಿ ಇಡೀ ರಾಷ್ಟ್ರದಲ್ಲಿಯೇ ಪ್ರಥಮ ಬಾರಿ ಮೂರ್ತಿ ಪ್ರತಿಷ್ಠಾಪಿಸಲಾಯಿತು ಎಂದು ಅವರು ಹೇಳಿದರು.
ನನ್ನ ತಂದೆ ಹಾಗೂ ಆಗಿನ ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ನಮನಗಳು. ಪೋಲಿಸ್ ಕಾರ್ಯಾಚರಣೆ ಮೂಲಕ ನಿಜಾಮ್ ಸರ್ಕಾರವನ್ನು ತಲೆ ಬಾಗುವಂತೆ ಮಾಡಿ ಭಾರತದ ಒಕ್ಕೂಟದಲ್ಲಿ ಸೇರಿಸಿದ ಪೂರ್ಣ ಕೀರ್ತಿ ಅವರಿಗೆ ಸಲ್ಲಬೇಕು ಎಂದು ಅವರು ತಿಳಿಸಿದರು.
ಸಂಘಟನೆಯ ಕಾರ್ಯದರ್ಶಿ ಜಗನ್ನಾಥ್ ಮಂಠಾಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೈಜ ಹೈದ್ರಾಬಾದ್ ಕರ್ನಾಟಕ ವಿಮೋಚನೆ ಸೆಪ್ಟೆಂಬರ್ 18ರಂದು ಆಗಿದೆ. ಅದಕ್ಕೋಸ್ಕರ ಕಳೆದ ದಶಕಗಳಿಂದ ನಾವು ಇದೇ ದಿನದಂದು ಆಚರಿಸುತ್ತ ಬಂದಿದ್ದೇವೆ ಎಂದರು.
ಸಂಘಟನೆಯ ಅಧ್ಯಕ್ಷ ಅನಂತ್ ಗುಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನಾಔಉ ನಮ್ಮ ನಡೆ ಕಲ್ಯಾಣ ಕರ್ನಾಟಕದ ಪ್ರತ್ಯೇಕ ರಾಜ್ಯ ನಿರ್ಮಾಣದ ಕಡೆ ಎನ್ನುವ ಧೋರಣೆಯನ್ನು ಹೊಂದಿ ಕಾರ್ಯವನ್ನು ನಮ್ಮ ಒಕ್ಕೂಟದ ಗುರಿ ಮತ್ತು ಸಂಕಲ್ಪವೆಂದು ಘೋಷಿಸಿಕೊಂಡು ಸೇವೆಗಳನ್ನು ಮಾಡುತ್ತಿದ್ದೇವೆ ಎಂದರು.
ನಾವು ಮೊದಲು ಕಲಬುರ್ಗಿ ಅಭಿವೃದ್ಧಿ ಹೋರಾಟ ಸಮಿತಿ ಅಡಿಯಲ್ಲಿ ಸಾಮಾಜಿಕ ಸೇವೆಯನ್ನು ಕೈಗೊಂಡಿದ್ದು, ಈಗ ಅದನ್ನು ವಿಸ್ತರಿಸಿ 371(ಜೆ) ಅಡಿಯಲ್ಲಿ ಕಾರ್ಯ ನಿರ್ವಹಿಸಲು ಪಣ ತೊಡಲಾಗಿದೆ. ಆ ನಿಟ್ಟುನಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೆ. ವಿನೋದಕುಮಾರ್ ಅವರೊಂದಿಗೆ ಸೇಇ ಕಾನೂನು ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ದಿನಾಂಕ ತಿದ್ದುಪಡಿ ಮಾಡುವ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಪರಿಗಣಿಸುತ್ತೇನೆ ಎಂದು ಕೇವಲ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದರು.
ನಮಗೆ ಸ್ವಾತಂತ್ರ್ಯವು ಒಂದು ವರ್ಷ, ಒಂದು ತಿಂಗಳು ನಾಲ್ಕು ದಿನಗಳ ನಂತರ ದೊರಕಿದೆ. ಒಂದು ತಿಂಗಳು ಕಾಯ್ದು ನೋಡಿ, ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಹೊಸ ಆದೇಶ ಹೊರಡಿಸಲು ಶಾಸಕರ ನೇತೃತ್ವದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ರಾಜಕೀಯ ಮುಖಂಡ ಹಾಗೂ ವಿಭಾಗೀಯ ಕಾರ್ಯಾಧ್ಯಕ್ಷ ಉದಯಕುಮಾರ್ ಜೇವರ್ಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಂದಿಸಿದರು. ಆರಂಭದಲ್ಲಿ ನ್ಯಾಯವಾದಿ ಜೇನವೆರಿ ವಿನೋದಕುಮಾರ್ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ನಾಗಣ್ಣ ಶೀಲವಂತ್, ಜಿಲ್ಲಾ ಸಂಘಟನೆಯ ಭೀಮರಾವ್ ಜಿರಗಿ, ಲಿಂಗಣ್ಣ ಹೊಸಮನಿ, ಸಂಚಾಲಕ ಶರಣಗೌಡ ಪಾಟೀಲ್ ಜಾಪುರ್, ಹಿರಿಯ ನ್ಯಾಯವಾದಿ ದೌಲತರಾಯ್ ಮಾಲಿಪಾಟೀಲ್, ರಾಜಗೋಪಾಲ್ ಭಂಡಾರಿ, ನೋಟರಿ ಶ್ರೀಮಂತ್ ಆರ್. ಲೆಂಗಟಿಕರ್, ಸದಸ್ಯರಾದ ಮೆಹಬೂಬ್‍ಸಾಬ್ ಟೈಲರ್, ಸಚಿನ್ ಮುಂತಾವದರು ಉಪಸ್ಥಿತರಿದ್ದರು.