ಸೆ.17 ರಂದು ವಿಶ್ವಕರ್ಮ ಜಯಂತಿ: ಭಜಂತ್ರಿ

ಧಾರವಾಡ, ಸೆ.8: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸೆಪ್ಟಂಬರ್ 17 ರಂದು ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೆ.17 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಯು ನಗರದ ಕಸಬಾಗೌಡ್ರ ಓಣಿ, ಮೌನೇಶ್ವರ ಮಠ, ಕಾಮನಕಟ್ಟಿ, ಮಂಗಳವಾರ ಪೇಟೆ, ರವಿವಾರ ಪೇಟೆ, ಗಾಂಧಿ ಚೌಕ, ಸುಭಾಸ ರಸ್ತೆಯ ಮೂಲಕ ಆಲೂರು ವೆಂಕಟರಾವ್ ಸಭಾಭವನಕ್ಕೆ ಆಗಮಿಸಲಿದೆ.

ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ವಿಶೇಷ ಉಪನ್ಯಾಸ ಆಯೋಜಿಸಲಾಗುವುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಕುಮಾರ ಬೆಕ್ಕೇರಿ, ಮುಖಂಡರಾದ ಶಿವಣ್ಣ ಬಡಿಗೇರ, ಎಂ.ಬಿ.ಬಡಿಗೇರ, ರಾಮಣ್ಣ ಬಡಿಗೇರ, ವಸಂತ ಅರ್ಕಾಚಾರ, ಕಾಳಪ್ಪ ಬಡಿಗೇರ, ಸಂತೋಷ ಬಡಿಗೇರ, ವಸಂತ ಕಿಲ್ಲೇದ, ಭಾಸ್ಕರ್ ಬಡಿಗೇರ ಸೇರಿದಂತೆ ಇತರರು ಭಾಗವಹಿಸಿದ್ದರು.