ಸೆ.17 ರಂದು ವಿಜೃಂಭಣೆಯಿAದ ವಿಶ್ವಕರ್ಮ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.8;ಜಿಲ್ಲಾಡಳಿತ, ಜಿಲ್ಲಾಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿವಿಧ ವಿಶ್ವಕರ್ಮ ಸಂಘಟನೆಗಳ ಸಹಯೋಗದಲ್ಲಿ ಸೆ.17 ರಂದು ವಿಜೃಂಭಣೆಯಿAದ ವಿಶ್ವಕರ್ಮ ಜಯಂತಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಮಾಡಿದರು.ಜಗತ್ತಿನ ಎಲ್ಲಾ ಕುಶಲಕರ್ಮಿಗಳು ವಿಶ್ವಕರ್ಮಿಗಳೇ, ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ 5 ಕುಲಕಸುಬುಗಳು ವಿಶ್ವಕರ್ಮನಿಂದ ಹುಟ್ಟಿಕೊಂಡಿವೆ ಎಂಬ ನಂಬಿಕೆಯಿದೆ. ವಿಶ್ವಕರ್ಮ ಸಮುದಾಯದ ಎಲ್ಲಾ ಭಾಂದವರು ಜಯಂತಿಯನ್ನು ಹಬ್ಬದ ರೀತಿ ಆಚರಿಸಬೇಕು. ಸರ್ಕಾರದ ಶಿಷ್ಠಾಚರಾದ ಅನುಸಾರ ಆಹ್ವಾನ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳನ್ನು ಜಯಂತಿ ಕರೆಯಲಾಗುವುದು.  ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುವುದು. ಸಮುದಾಯದಲ್ಲಿ ಸಾಧನೆ ತೋರಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.ವಿಶ್ವಕರ್ಮ ಭಾವಚಿತ್ರ ಮೆರವಣಿಗೆ : ಜಯಂತಿ ಅಂಗವಾಗಿ ನಗರದ ಬುರಜಹಟ್ಟಿ ಆಂಜನೇಯ ದೇವಸ್ಥಾನದಿಂದ ತರಾಸು ರಂಗ ಮಂದಿರದವರೆಗೆ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ಬೆಳಿಗ್ಗೆ 9:30 ಮೆರವಣಿಗೆ ಚಾಲನೆ ನೀಡಲಾಗುವುದು. ನಾದಸ್ವರ ಡೊಳ್ಳು ಸೇರಿದಂತೆ ವಿವಿಧ ಜನಾಪದ ಕಲಾತಂಡಗಳು ಭಾಗವಹಿಸುವವು.  ಮಧ್ಯಾಹ್ನ 12 ಗಂಟೆಗೆ ತರಾಸು ರಂಗಮAದಿರಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ.ಸಭೆಯಲ್ಲಿ ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಪೊಲೀಸ್ ನಿರೀಕ್ಷಕ ಗುಡಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ವಿಶ್ವಕರ್ಮ ಸಮಾಜದ ಮುಖಂಡರಾದ ಕೆ.ಟಿ.ಸುರೇಶ್ ಆಚಾರಿ, ಶಂಕರಾಚಾರಿ, ಕೆ.ಶಿವನ್ನಾಚಾರಿ, ರಮೇಶಚಾರಿ, ಪ್ರಸನ್ನಕುಮಾರ್, ನಟರಾಜ, ಕೆ.ಮಲ್ಲಿಕಾರ್ಜುನಾಚಾರ್, ಸಿ.ಆರ್.ಸುರೇಶ್, ಎಂ.ಲೀಲಾಧರ್, ರಾಮಾಚಾರ್ಯ ಶಿಲ್ಪಿ ಸೇರಿದಂತೆ ಮತ್ತಿತರರು ಇದ್ದರು