ಸೆ.17ರಂದು ವಿಶ್ವಕರ್ಮ ದಿನಾಚರಣೆ

ವಿಜಯಪುರ ಸೆ.12: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇದೇ ಸೆ 17 ರಂದು ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಅಂದು ಬೆಳಿಗ್ಗೆ 9-30 ಗಂಟೆಗೆ ನಗರದ ಶ್ರೀ ಸಿದ್ದೆಶ್ವರ ದೇವಸ್ಥಾನದಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ವಿವಿಧ ಕಲಾ ತಂಡಗಳೊಂದಿಗೆ ವಿಶ್ವಕರ್ಮ ಭಾವಚಿತ್ರ ಮೆರವಣಿಗೆ ಬೆಳಿಗ್ಗೆ 10-30ಕ್ಕೆ ನಗರದ ಕಂದಗಲ್ಲ ಶ್ರೀ ಹನಂಮಂತರಾಯ ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಕಾರ್ಯಕ್ರಮದಲ್ಲಿ ನಾಡಗೀತೆ, ಉಪನ್ಯಾಸ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ವೇದಿಕೆ, ಆಸನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಗಣ್ಯರಿಗೆ ಆಹ್ವ ಆನ, ಕುಡಿಯುವ ನೀರಿನ ವ್ಯವಸ್ಥೆ, ದೀಪಾಲಂಕಾರ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿಲಿಯಮ್ಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ್, ಅಡಿವೆಪ್ಪ ಸಾಲಗಲ್ಲ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ, ಗಿರೀಶ ಕುಲಕರ್ಣಿ, ದೆವೇಂದ್ರ ಮೀರೇಕರ, ಪ್ರಮೊದ ಬಡಿಗೇರ, ಡಾ. ಮೌನೇಶ ಪತ್ತಾರ, ಪ್ರದೀಪ ಬಡಿಗೇರ, ಎಮ್.ಎಸ್ ಶಿದರೆಡ್ಡಿ, ಈರಣ್ಣ ಪತ್ತಾರ,ಶಿಲಾಧರ ಪತ್ತಾರ, ಬಿ.ಜಿ. ಲಮಾಣಿ, ಭೀಮಾಶಂಕರ ಪತ್ತಾರ, ಮೌನೇಶ ನಾಯಕ, ಪ್ರಣವ ಕುರ್ಲೇ, ಭೋಗೇಶ ರಾಮಕೋಟಿ ಹಾಗೂ ಮೌನೇಶ ಕೊಟ್ನೂರ ಉಪಸ್ಥಿತರಿದ್ದರು.