ಸೆ. 16 ರಂದು ಪ್ಲಾಸ್ಟಿಕ್ ಮುಕ್ತ ಅಭಿಯಾನ

ಕಲಬುರಗಿ:ಸೆ.12:ಪ್ಲಾಸ್ಟಿಕ ಮುಕ್ತ ಅಭಿಯಾನ ಅಂಗವಾಗಿ ಸೆಪ್ಟೆಂಬರ್ 16 ರಂದು ಮಹಾನಗರ ಪಾಲಿಕೆ ನಗರದಲ್ಲಿ ಏಕ ಬಳಕೆಯ ಪ್ರಾಸ್ಟಿಕ ನಿಷೇಧದ ಕುರಿತು ಅರಿವು ಮೂಡಿಸಲು ಪ್ಲಾಗಾಥಾನ ಎಂಬ ಕಲಬುರಗಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಸಮಯ ಬೆಳಿಗ್ಗೆ 6 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಪಾಟೀಲ ಭುವನೇಶ್ವರ ದೇವಿದಾಸ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಏಕ ಬಳಕೆಯ ಪ್ಲಾಸ್ಟಿಕ ನಿಷೇಧ’’ ಅರಿವು ಮೂಡಿಸಲು “ಪ್ಲಾಗಾಥಾನ” ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸ್ಪರ್ಧಾಳುಗಳು ತಮ್ಮ ಹೆಸರುಗಳನ್ನು ಕಚೇರಿ ಸಮಯದಲ್ಲಿ ಮೊಬೈಲ್ ನಂ 9448586830 ಹಾಗೂ 7899148768 ನಂಬರಗಳಿಗೆ ತಮ್ಮ ಹೆಸರುಗಳನ್ನು ನೊಂದಯಿಸಿಕೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ಮೂರು ವಿಭಾಗಳನ್ನಾಗಿ ವಿಂಗಡಿಸಿದ್ದಾರೆ 19 ವರ್ಷಗಳ ಒಳಗಿನ, ಸಾಮಾನ್ಯ, ಸರ್ಕಾರಿ ನೌಕರರಿಗಾಗಿ ಭಾಗವಹಿಸಲು ಗರಿಷ್ಥ 20 ಜನ ಸ್ಪರ್ಧಿಗಳಲ್ಲಿ ವಿಜೇತರಾದವರಿಗೆ ಮೊದಲನೆ ಬಹುಮಾನ 15000 ರೂ, ಹಾಗೂ ದ್ವಿತೀಯ ಬಹುಮಾನ 10000 ರೂ, ಮೂರನೆ ಬಹುಮಾನ 5000 ರೂ ವಿತರಿಸಲಾಗುವುದು.