ಸೆ. 15 ರಿಂದ ಅ. 2 ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತಾ ಹಿ ಸೇವಾ/ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನ

ಕಲಬುರಗಿ,ಸೆ.14:ಸ್ವಚ್ಛತಾ ಹಿ ಸೇವಾ/ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನವನ್ನು ಇದೇ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥವಾಗಿ ʼಸ್ವಚ್ಛ ಭಾರತ ದಿನʼ ವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮರ ಧ್ಯೇಯ ವಾಕ್ಯ ‘ಸ್ವಚ್ಛತೇಯೇ ದೈವತ್ವʼ ಎಂಬ ಕನಸನ್ನು ನನಸಾಗಿಸಲು 2023ರ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ರವರೆಗೆ 15 ದಿನಗಳ ಕಾಲ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ʼಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆʼ ಎಂಬ ವಿಶೇಷ ಆಂದೋಲನವನ್ನು “ಕಸಮುಕ್ತ / ತ್ಯಾಜ್ಯ ಮುಕ್ತ ಭಾರತ” ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಬೇಕೆಂದು ಜಲಶಕ್ತಿ ಸಚಿವಾಲಯವು ಸೂಚಿಸಿರುತ್ತದೆ.
‘ಸ್ವಚ್ಛತಾ ಹಿ ಸೇವಾ/ಸ್ವಚ್ಛತೆಯೇ ಸೇವೆʼ ಎಂಬ ವಿಶೇಷ ಆಂದೋಲನಕ್ಕೆ ʼಕಸ ಮುಕ್ತ/ತ್ಯಾಜ್ಯ ಮುಕ್ತ ಭಾರತʼ ಎಂಬುವುದಾಗಿ ಈ ವರ್ಷದ ಘೋಷ ವಾಕ್ಯವಾಗಿ ಘೋಷಿಸಲಾಗಿದೆ. ಎಲ್ಲೆಡೆ ಸದೃಶ್ಯ ಸ್ವಚ್ಛತೆ ಸಾಧಿಸಿ, ಸ್ವಚ್ಛ ಸುಂದರ ಸಧೃಢ ಗ್ರಾಮಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಕಳೆದ ವರ್ಷಗಳಂತೆಯೇ ಗ್ರಾಮಗಳ ಸ್ವಚ್ಛತೆಗೆ ಸ್ವಯಂಪ್ರೇರಿತವಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುವುದು. ರಾಜ್ಯದ ಜಿಲ್ಲೆ/ತಾಲ್ಲೂಕು/ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಹೆಚ್ಚು ಜನಜಂಗುಳಿಯಿರುವ ಸ್ಥಳಗಳಾದ ಬಸ್ ನಿಲ್ದಾಣ ರೈಲು ನಿಲ್ದಾಣ ನದಿ ತೀರ ಪ್ರದೇಶ, ಸಾಂಸ್ಥಿಕ/ಸಮುದಾಯ ಭವನ, ಪ್ರವಾಸಿ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ಪ್ರಾಣಿ ಸಂಗ್ರಹಾಲಯ, ಐತಿಹಾಸಿಕ ಸ್ಮಾರಕಗಳು, ಚರಂಡಿಗಳು ಮತ್ತು ನಾಲಾಗಳು ಮುಂತಾದ ಸ್ಥಳಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮತ್ತು ದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಮತ್ತು ವಿವಿಧ ಚಟುವಕೆಗಳನ್ನು ಆಯೋಜಿಸಬೇಕು. ಸ್ವಚ್ಛತಾ ಹೀ ಸೇವಾ/ಸ್ವಚ್ಛತೆಯೇ ಸೇವೆʼ ಎಂಬ ವಿಶೇಷ ಆಂದೋಲನದ ಭಾಗವಾಗಿ ಈ ಕೆಳಕಂಡಂತೆ ವಿವಿಧ ಕ್ರಮಗಳನ್ನು ಆಯೋಜಿಸುವುದು.
ಇದೇ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ 15 ದಿನಗಳ ಕಾಲ ಮೇಲೆ ವಿವರಿಸಿದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು. ಪ್ರಮುಖ ಸ್ಥಳಗಳಲ್ಲಿ ಕಸಮುಕ್ತವನ್ನಾಗಿಸಿ ಸದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳುವುದು. ಎಲ್ಲಾ ತಾಲ್ಲೂಕುಗಳಲ್ಲಿ ಸಂಬಂಧಪಟ್ಟ ಶಾಸಕರು, ಜನಪ್ರತಿನಿಧಿಗಳು, ಸಂಘ/ಸಂಸ್ಥೆಗಳು ಮುಂತಾದವರೆಲ್ಲರೂ ಸೇರಿ ಈ ಆಂದೋಲನದಲ್ಲಿ ಭಾಗವಹಿಸಿ ಶ್ರಮದಾನ ಚಟುವಟಿಕೆ ಮಾಡುವ ಮೂಲಕ ಉತ್ತೇಜನ ನೀಡುವುದು.
ತಾಲ್ಲೂಕುಗಳು ಗ್ರಾಮೀಣ ಪ್ರದೇಶಗಳ ಪಾರಂಪರಿಕ ತ್ಯಾಜ್ಯಗಳ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು. ನೈರ್ಮಲ್ಯ ಸಂಬಂಧಿತ ಆಸ್ತಿಗಳು (ಸ್ವಚ್ಛ ಸಂಕೀರ್ಣ ಕಸದ ಬುಟ್ಟಿಗಳು, ಸಮುದಾಯ ಶೌಚಾಲಯ, ಕಸ ಸಂಗ್ರಹಣಾ ವಾಹನ ಇತರೆ ಸರ್ಕಾರಿ ಕಟ್ಟಡಗಳು, ಇತರೆ ಪ್ರದೇಶಗಳನ್ನು ಸ್ವಚ್ಛಗೊಳಿಸಿ/ ದುರಸ್ತಿಗೊಳಿಸಿ, ವಿಶೇಷ ಬ್ರ್ಯಾಂಡಿಂಗ್/ಬಣ್ಣ ಬಳಿಯುವ ವ್ಯವಸ್ಥೆ ಮಾಡುವುದು.
ಹಳ್ಳಿಗಳಲ್ಲಿ ವಿಶೇಷವಾಗಿ ಮಾರುಕಟ್ಟೆಗಳು, ಸಾರ್ವಜನಿಕ ಸ್ಥಳಗಳು, ಪ್ರವಾಸಿ ತಾಣಗಳು ಇತ್ಯಾದಿ ಪ್ರದೇಶ ವ್ಯಾಪ್ತಿಗಳಲ್ಲಿ ಕಸದ ಬುಟ್ಟಿಗಳನ್ನು ಇಟ್ಟು Sಃಒ ಅಂಶಗಳ ವರ್ಣಚಿತ್ರಗಳು ಬರೆಯುವುದು. ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸ್ವಚ್ಛತಾ ರಸ ಪ್ರಶ್ನೆಗಳು, ಗಿಡ ನೆಡುವುದು, ಸ್ವಚ್ಛತಾ ಪ್ರತಿಜ್ಞೆಗಳು, ಸ್ವಚ್ಛತಾ ಓಟ, ನೀರಿನ ಮೂಲ ಮತ್ತು ನದಿ ತೀರ ಪ್ರದೇಶಗಳಲ್ಲಿ ಇರುವ ತ್ಯಾಜ್ಯ (ಪ್ಲಾಸ್ಟಿಕ್ ಸೇರಿದಂತೆ) ಸ್ವಚ್ಛಗೊಳಿಸಲು ವಿಶೇಷ Pಟoggiಟಿg ಆಡಿives, ಒಚಿಡಿಚಿಣhoಟಿ ಅಡಿ ಹಮ್ಮಿಕೊಳ್ಳಬೇಕು. ಪ್ರವಾಸಿ ತಾಣಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳ ಬಳಕೆಯನ್ನು ನಿμÉೀಧಿಸುವುದು, ಹಸಿ-ಒಣ ಕಸದ ತೊಟ್ಟೆಗಳನ್ನು ಇಡುವುದು. ವಿವಿಧ ಐಇಸಿ ಜಾಗೃತಿ ಸಂದೇಶಗಳನ್ನು ಹೆಚ್ಚು ಪ್ರವಾಸಿಗರಿಗೆ ತಲುಪಲು ಕ್ರಮವಹಿಸಬೇಕು.
ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳ ಪರ್ಯಾಯವಾಗಿ ಬಟ್ಟೆ/ಚೀಲಗಳನ್ನು ಬಳಸಲು ಪ್ರೇರೇಪಿಸಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲದಲ್ಲಿ ತ್ಯಾಜ್ಯ ವಿಂಗಡಣೆ, ತ್ಯಾಜ್ಯದ ಸಾಗಣೆ ವಿಲೇವಾರಿ, ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿಸುವ ಪ್ರಾಮುಖ್ಯತೆಯನ್ನು ತಿಳಿಸುವುದು.
ಸಾಧ್ಯವಾದಲ್ಲೆಲ್ಲಾ, ಶಾಲಾ ಕಾಲೇಜು ಪ್ರದೇಶಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ನೈರ್ಮಲ್ಯ ಕುರಿತು ಗುಂಪುಗಳನ್ನು ರಚಿಸಿ ಉಸ್ತುವಾರಿ ಮಾಡಲು ನಿಯೋಜಿಸುವುದು. ಸ್ವಚ್ಛ ಭಾರತ ಅಭಿಯಾನ ಅನುμÁ್ಠನವಾದ ಇತಿಹಾಸ ಬಗೆ ಮುಂತಾದ ಮಾಹಿತಿಗಳನ್ನು ಚರ್ಚಿಸಲು ವಿಶೇಷ ಸಮಾರಂಭಗಳನ್ನು ಆಯೋಜಿಸಿ, ಕ್ರೀಡೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಇಂಡಿಯನ್ ಸ್ವಚ್ಛತಾ ಲೀಗ್ 2.0: ರಾಜ್ಯದಾದ್ಯಂತ ಪ್ರವಾಸಿ ಸ್ಥಳಗಳು: ವಿಶೇಷವಾಗಿ ನದಿ ತೀರಗಳು, ಬೆಟ್ಟಗಳು ಮತ್ತು ಇತರೆ ಪ್ರಮುಖ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಯುವಕರನ್ನು ಸಜ್ಜುಗೊಳಿಸಲು ಸೆಪ್ಟೆಂಬರ್ 17 ರಿಂದ 23 ರವರೆಗೆ ಈ ಸ್ಪರ್ಧೆಯನ್ನು ಆಯೋಜಿಸಬೇಕು.
ಸಫಾಯಿಮಿತ್ರ ಸುರಕ್ಷ ಶಿಬಿರ: ಜಿಲ್ಲೆಯ ನೈರ್ಮಲ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರನ್ನು ಸಂಯೋಜಿಸಿ ಸೆಪ್ಟೆಂಬರ್ 17 ರಿಂದ ಆರೋಗ್ಯ ತಪಾಸಣೆ ಮಾಡಬೇಕು.
ಭಾರತ ಸರ್ಕಾರದ ಜಲಶಕ್ತಿ ಸಚಿವರು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ವಿಡಿಯೋ ಸಂವಾದ (ವರ್ಚುವಲ್ ಪೆÇ್ರೀಗ್ರಾಂ) ಮೂಲಕ ಸೆಪ್ಟೆಂಬರ್-15 ರಂದು SಊS-2023 ನ್ನು ಜಂಟಿಯಾಗಿ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಸಚಿವರು, ಗ್ರಾಮ/ತಾಲ್ಲೂಕು/ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಗಳ ಸಹ ಇಲಾಖೆಗಳ ಅಧಿಕಾರಿಗಳೊಂದಿಗೆ (ಶಿಕ್ಷಣ ಯುವಜನ ಮತ್ತು ಕ್ರೀಡಾ ಇಲಾಖೆ, ಪ್ರವಾಸ್ಯೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಮತ್ತು ಇತರೆ) ‘ಸಂವಾದʼವನ್ನು ಸಹ ನಡೆಸಲಿದ್ದಾರೆ. ವಿಡಿಯೋ ಸಂವಾದ (ವರ್ಚುವಲ್ ಪೆÇ್ರೀಗ್ರಾಂ) ಲಿಂಕ್ ಅನ್ನು ಶೀಘ್ರದಲ್ಲೇ ಇ-ಮೇಲ್ ಮೂಲಕ ಹಂಚಿಕೊಳ್ಳಲಾಗುವುದು.
ಈ ನಿಟ್ಟಿನಲ್ಲಿ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ತಮ್ಮ ಹಂತದಲ್ಲಿ ಸಭೆಯನ್ನು ವಿವಿಧ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ತಿಳಿಸಿ ಮತ್ತು ʼಸ್ವಚ್ಛತಾ ಹೀ ಸೇವಾ/ಸ್ವಚ್ಛತೆಯೇ ಸೇವೆʼ ಯಲ್ಲಿ ಉತ್ತಮ ಯಶಸ್ಸುಗಳಿಸುವ ಉದ್ದೇಶದಿಂದ ಸಧೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕೆಂದು ಅವರು ತಿಳಿಸಿದ್ದಾರೆ.