ಸೆ.15 ರಂದು ಇಂಜಿನಿಯರ್ಸ್ ದಿನಾಚರಣೆ ಸಂಘದ ಬೆಳ್ಳಿ ಮಹೋತ್ಸವ ಆಚರಣೆ, ಶಿಘ್ರವೆ ನೂತನ ಕಟ್ಟಡ ಉದ್ಘಾಟನೆ : ಅಶೋಕಕುಮಾರ ಉಪ್ಪೆ

ಬೀದರಃಸೆ.13: ಸಂಘ ಸ್ಥಾಪನೆ ಮಾಡಿ 25 ವರ್ಷಗಳಾಗುತ್ತಿರುವುದರಿಂದ ಬೆಳ್ಳಿ ಮಹೋತ್ಸವ ಮತ್ತು ಸರ್. ಎಂ. ವಿಶ್ವೇಶ್ವರಯ್ಯನವರ 162 ಜನ್ಮದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ದಿ. 15-09-2023 ರಂದು ಬೀದರಿನ ಗುರುನಾನಕ ಝಿರಾ ರಸ್ತೆಯಲ್ಲಿರುವ ಲಾವಣ್ಯ ಕನವೆನ್ಷನ್ ಹಾಲ್‍ನಲ್ಲಿ ಆಚರಿಸಲಾಗುತ್ತಿದೆ ಎಂದು ಅಸೋಷಿಯೆಶನ್ ಆಫ್ ಕನ್ಸಲಟಿಂಗ್ ಸಿವಿಲ್ ಇಂಜಿನಿಯರ್ಸ್, ಬೀದರನ ಅಧ್ಯಕ್ಷ ಹಿರಿಯ ಇಂಜಿನಿಯರರಾದ ಅಶೋಕಕುಮಾರ ಉಪ್ಪೆ ಅವರು ಇಂದು ದಿ. 12-9-2023 ರಂದು ಬೆಳಿಗ್ಗೆ 10 ಗಂಟೆಗೆ ಹಳ್ಳದಕೇರಿ ಸಮೀಪದಲ್ಲಿರುವ ಸ್ವರ್ಣ ನಂದನ ಬಡಾವಣೆಯ ಆವರಣದಲ್ಲಿನ ಸಂಘದ ನೂತನ ಕಟ್ಟಡದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಂಘದಿಂದ ಸಮಾಜ ಮತ್ತು ಜನತೆಯ ಪ್ರಗತಿಗಾಗಿ ಶ್ರಮಿಸುತಿದ್ದು, ಸಿಮೆಂಟ್ ಕಾಂಕ್ರೆಟ್, ಪ್ಲಾಸ್ಟರ್, ಇಂಜಿನಿಯರ ಮೆಟಿರಿಯಲ್ಸ್, ತಾಂತ್ರಿಕ ಸೇರಿದಂತೆ ವಿವಿಧ ರೀತಿಯ ಕಾರ್ಮಿಕರುಗಳಿಗೆ ಸೂಕ್ತ ಮಾಹಿತಿ ನೀಡುವುದು ಮತ್ತು ಗುಣಮಟ್ಟ, ಬಾಳಿಕೆ, ಯಾವ ಯಾವ ವಸ್ತುಗಳನ್ನು ಹೇಗೆ ಬಳಸಬೇಕು, ಎಷ್ಟು ಅನುಪಾತದಲ್ಲಿ ಬಳಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ಕಾಲ ಕಾಲಕ್ಕೆ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ದಿ. 15 ರಂದು ಬೆಳಿಗ್ಗೆ 9-30 ಗಂಟೆಗೆ ನಗರದ ಬಸವೇಶ್ವರ ಸರ್ಕಲ್‍ದಿಂದ ಝಿರಾ ಫಂಕ್ಷನ್ ಹಾಲ್‍ವರೆಗೆ ಮೆರವಣಿಗೆ ನಡೆಯುವುದು. ಅಲ್ಲಿ ಬಿಲ್ಡ್ ಎಗ್ಝಿಬಿಷನ್ ಇರುವುದು, ಅಲ್ಲಿ ವಿಜೇತರಿಗೆ ಲಾಟ್ರಿ ಮೂಲಕ ಬಹುಮಾನ ನೀಡಲಾಗುವುದು. ನಂತರ 11-30ಕ್ಕೆ ಲಾವ್ಯಣ್ಯ ಕನವೆನ್ಷನ್ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್, ಕಾರ್ಯಕ್ರಮದ ಪ್ರಾಯೋಜಿತರಾದ ಕಾಲಿಕಾ ಸ್ಟೀಲ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಎಸ್. ಅನೀಲ ಗೋಯಲ್ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಅಧ್ಯಕ್ಷ ಅಶೋಕ ಉಪ್ಪೆ ತಿಳಿಸಿದರು.
ಹಿರಿಯ ಇಂಜಿನಿಯರ್ ಸಲಹಾ ಸಮಿತಿಯ ಸದಸ್ಯ ವೀರಶೆಟ್ಟಿ ಮಣಗೆ ಅವರು ವಿಷಯ ತಿಳಿಸಿ 25 ವರ್ಷಗಳ ಹಿಂದೆ ಸ್ವರ್ಣ ನಂದನ ಬಡಾವಣೆಯಲ್ಲಿ ಸುಮಾರು 16 ಲಕ್ಷಕ್ಕೂ ಹೆಚ್ಚು ಹಣ ನೀಡಿ ನಿವೇಶನ ಪಡೆಯಲಾಗಿತ್ತು. 23 ಲಕ್ಷ ರೂ. ಖರ್ಚು ಮಾಡಿ ನೂತನ ಕಟ್ಟಡ ಕಾರ್ಯಾಲಯವನ್ನು ನಿರ್ಮಿಸಲಾಗಿದೆ. ಮೊದಲನೆ ಅಂತಸ್ಥಿನ ಭಾಗವು ಇನ್ನು 30 ಲಕ್ಷ ರೂ. ಗಳ ಅವಶ್ಯಕತೆಯಿದೆ ಎಂದ ಅವರು ಶೀಘ್ರದಲ್ಲಿಯೇ ನೂತನ ಕಟ್ಟಡ ಕಾರ್ಯಾಲಯವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ಇಂಜಿನಿಯರ್ ದಿನಾಚರಣೆಗೆ ಸುಮಾರು 20 ಲಕ್ಷ ರೂ. ಗಳು ಖರ್ಚಾಗುತ್ತಿದ್ದು, ವಿವಿಧ ಅತಿಥಿಗಳಿಂದ ಉಪನ್ಯಾಸ, ಜಾಗೃತಿ ಮಾಹಿತಿಗಳನ್ನು ನೀಡಲಾಗುವುದು ಎಂದು ತಿಳಿಸಿದ ಅವರು ಬೀದರ ಎಂದೂ ಹಿಂದುಳಿದಿಲ್ಲ. ಅದು ನಮ್ಮವರ ಮನಸಿಕ ಸ್ಥಿತಿಯಾಗಿದೆ. ಸಾಕಷ್ಟು ಪ್ರಗತಿಪಥದಲ್ಲಿದ್ದೇವೆ ಎಂಬುದಕ್ಕೆ ಜಿಲ್ಲೆಯ ಕಟ್ಟಡಗಳ ಮತ್ತು ಅವುಗಳ ನಿರ್ಮಾಣದ ವಿನ್ಯಾಸಗಳೆ ಸಾಕ್ಷಿ ಎಂದ ಅವರು ಕಟ್ಟಡ ನಿಮಾಣ ಸಾಮಗ್ರಿಗಳ ಕುರಿತು. ಬೃಹತ್ ಆಗಿರುವಂತಹ ವಸ್ತು ಸಾಮಗ್ರಿಗಳ ಪ್ರದರ್ಶನ ಮುಂದೂಡಲಾಗಿದ್ದು, 2024ರ ಜನವರಿ ಅಥವಾ ಫೆವಬ್ರವರಿಯಲ್ಲಿ ಆಯೋಜನೆ ಮಾಡಲಾಗುವುದು. ಅದರ ಮೂಲಕ ಸಾರ್ವಜನಿಕರಿಗೆ ಮನೆ ಕಟ್ಟಡಗಳ ನಿರ್ಮಾಣ ಮಾಡಿಕೊಳ್ಳುವವರಿಗೆ ತುಂಬ ಅನುಕೂಲಕರವಾಗಲಿದೆ ಎಂದು ವೀರಶೆಟ್ಟಿ ಮಣಗೆ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅನೀಲಕುಮಾರ ಔರಾದೆ, ಕಾರ್ಯದರ್ಶಿ ದಿಲೀಪ ನಿಟ್ಟೂರೆ ಇಂಜಿನಿಯರ್, ಸಂಘಟನಾ ಕಾರ್ಯದರ್ಶಿ ಮಹೇಶ ಬಿ. ಸಲಹಾ ಸಮಿತಿ ಸದಸ್ಯರಾದ ರಾಜಶೇಖರ ಕರಪೂರ, ಸಂದೀಪ ಕಾಡಾದೆ, ಮನೋಹರ ದೀಕ್ಷಿತ್, ಶಿವಕುಮಾರ ಪಾಟೀಲ, ಸಂತೋಷ ಸುಂಕದ ಪ್ರಲ್ಹಾದ್ ಲಾಚೂರಿಯೆ ಅವರುಗಳು ಇಂಜಿನಿಯರ್ ದಿನಾಚರಣೆÉ ಮತ್ತು ಸಂಘದ ಬೆಳ್ಳಿ ಹಬ್ಬ ಕುರಿತು ವಿವರಿಸಿದರು.