ಸೆ.14 ರ ಡಿಎಸ್‍ಎಸ್ ರಾಜ್ಯಸಮ್ಮೇಳನ ಯಶಸ್ವಿಗೊಳಿಸಲು ಕರೆ


ಸಂಜೆವಾಣಿ ವಾರ್ತೆ
ಕುರುಗೋಡು.ಸೆ.14   ದಲಿತ ಸಂಘರ್ಷ ಸಮಿತಿ [ಡಿಎಸ್‍ಎಸ್] ಮೂರ್ತಿಬಣ ಸಂಘಟನೆಯ ರಾಜ್ಯಸಮ್ಮೇಳನ ಸೆ.14 ರಂದು, ಹಾಗು ರಾಷ್ರೀಯ ಪಕ್ಷದ  ಉದ್ಘಾಟನೆಯನ್ನು  ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಸಮ್ಮೇಳನಕ್ಕೆ ಕುರುಗೋಡು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ರಾಜ್ಯಸಮ್ಮೇಳವನ್ನು ಯಶಸ್ವಿಗೊಳಿಸಬೇಕೆಂದು ದಲಿತ ಸಂಘರ್ಷ ಸಮಿತಿ ಕುರುಗೋಡು ತಾಲೂಕು ಅದ್ಯಕ್ಷ ಈಶ್ವರ ಮನವಿ ಮಾಡಿದರು.
ಅವರು ಸೋಮವಾರ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಡಿಎಸ್‍ಎಸ್ [ಮೂರ್ತಿಬಣ] ಕುರುಗೋಡು ತಾಲೂಕು ಸಮಿತಿ ನೇತೃತ್ವದಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಡಿಎಸ್‍ಎಸ್ ಕುರುಗೋಡು ತಾಲೂಕು ಘಟಕದ ಪ್ರಧಾನಕಾರ್ಯದರ್ಶಿ ಅಂಬಣ್ಣ ಮಾತನಾಡಿ, ಡಿಎಸ್‍ಎಸ್ ಸಂಘಟನೆಯನ್ನು ಬಲಪಡಿಸಲುವ ಉದ್ದೇಶದಿಂದ ಬೆಂಗಳೂರಿನಲ್ಲಿ ರಾಜ್ಯಸಮ್ಮೇಳನ ಆಯೋಜಿಸಲಾಗಿದೆ. ಜೊತೆಗೆ  ಒಂದು ಉತ್ತಮವಾದ ರಾಷ್ರೀಯ ಪಕ್ಷದ ಉದ್ಘಾಟನೆಯನ್ನು ಸಹಸ್ರಾರು ಸಂಖ್ಯೆಯಲ್ಲಿ ಜನಸಮೂಹದೊಂದಿಗೆ ನೆರವೇರಿಸಲಾಗುವುದು ಆದ್ದರಿಂದ ಕುರುಗೋಡು ತಾಲೂಕಿನ ಎಲ್ಲಾ ಗ್ರಾಮಗಳ ಡಿಎಸ್‍ಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬಾಗವಸಬೇಕೆಂದು ನುಡಿದರು.
 ಪತ್ರಿಕಾಗೋಷ್ಟಿಯಲ್ಲಿ ಡಿಎಸ್‍ಎಸ್ ಕುರುಗೋಡು ತಾಲೂಕು ಘಟಕದ ಪದಾದಿಕಾರಿಗಳದ  ರವಿ, ದಿವಾಕರ, ಯಂಕಮ್ಮ, ಮಲ್ಲಪ್ಪ, ಸಣ್ಣಹುಲುಗಪ್ಪ,  ವೆಂಕಟೇಶ್, ರಾಮಲಿಂಗಪ್ಪ, ಸೋಮ, ಕುಮಾರಸ್ವಾಮಿ, ರೋಜಪ್ಪ, ಸೇರಿದಂತೆ ಇತರರು ಇದ್ದರು.